ಅಜ್ಜಿ, ತಾತ ತುಂಬಾ ನೋವಲ್ಲಿದ್ದಾರೆ; ಆ ವಿಡಿಯೋಗಳನ್ನು ನಾನು ನೋಡುವ ಧೈರ್ಯ ಮಾಡಿಲ್ಲ; ನಿಖಿಲ್ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಿಖಿಲ್ ಕುಮಾರಸ್ವಾಮಿ, ವಿಷಯ ಕೇಳಿ ನನಗೂ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅಜ್ಜಿ, ತಾತ ಸಾಕಷ್ಟು ನೋವಲ್ಲಿದ್ದಾರೆ. ನನಗೂ ನೋವಾಗಿದೆ. ನಾನು ಆ ವಿಡಿಯೋಗಳನ್ನು ನೋಡುವ ಧೈರ್ಯ ಮಾಡಿಲ್ಲ. ಆದರೆ ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ ಆ ವಿಡಿಯೋಗಳನ್ನು ಕನಿಷ್ಟ ಪಕ್ಷ ಬ್ಲರ್ ಕೂಡ ಮಾಡಿಲ್ಲ. ಆ ಹೆಣ್ಣುಮಕ್ಕಳ ಮುಖವನ್ನು ಬ್ಲರ್ ಮಾಡದೇ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹರಿಬಿಡಲಾಗಿದೆ. ಇದು ನಿಜಕ್ಕೂ ಬೇಸರವಾಗುತ್ತಿದೆ ಎಂದರು.

ಈಗಾಗಲೇ ಎಸ್ ಐಟಿ ರಚನೆಯಾಗಿದೆ ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ತನಿಖೆ ನಡೆಯುತ್ತಿದೆ ಈ ಬಗ್ಗೆ ನಾನು ಹೆಚ್ಚು ಮತನಾಡಲ್ಲ ಎಂದರು.

ಇನ್ನು ಹಾಸನದ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹಾಸನಕ್ಕೆ ಹೆಚ್ಚು ಹೋಗುವುದೂ ಇಲ್ಲ. ಹೋದರೆ ಹಾಸನಾಂಬೆ ಉತ್ಸವಕ್ಕೆ ಹೋಗಿ ಬರುತ್ತೇನೆ ಅಷ್ಟೇ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read