ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಕೆಲಸ ಮಾಡಿದ್ದಾರೆ. ಜೈಲಿನಲ್ಲಿರುವ ಕೈದಿಗಳು, ವಿಚಾರಣಾಧೀನ ಕೈದಿಗಳು ಜೈಲಿನ ಲೈಬ್ರರಿಗೆ ಬಂದು ಪುಸ್ತಕಗಳನ್ನು ಪಡೆದರೆ ಅವುಗಳನ್ನು ನೋಂದಣಿ ಮಾಡಿಕೊಡುವ ಕೆಲಸ ಇದಾಗಿದೆ.
ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡಿದ ಪ್ರಜ್ವಲ್ ರೇವಣ್ಣಗೆ ದಿನಗೂಲಿಯಂತೆ ಸಂಬಳವನ್ನೂ ಕೊಡಲಾಗುತ್ತದೆ. ಕೆಲಸಕ್ಕೆ ಬಾರದಿದ್ದಾಗ ಸಂಬಳ ಕಟ್ ಮಾಡಲಾಗುತ್ತದೆ. ಒಂದು ದಿನಕ್ಕೆ 522 ರೂಪಾಯಿ ಸಂಬಳ ಫಿಕ್ಸ್ ಮಾಡಲಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.