ಚಿತ್ರೀಕರಣಕ್ಕೆ ವಾಪಸ್ಸಾದ ರಾಮ್ ಚರಣ್ ಗೆ ʼನಾಟು ನಾಟುʼ ಸ್ಟೆಪ್ಸ್ ಮೂಲಕ ವೆಲ್‌ ಕಮ್; ಪ್ರಭುದೇವ‌ ವಿಡಿಯೋ ವೈರಲ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಾಗಿನಿಂದ ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆ ಸಖತ್ ಸದ್ದು ಮಾಡ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲೂ ಅದರದ್ದೇ ಹವಾ.

ರಾಮ್ ಚರಣ್ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸಹ ಈ ವೃತ್ತಿಜೀವನದ ಮೈಲಿಗಲ್ಲು ಆಚರಿಸುತ್ತಿದ್ದಾರೆ. ನಿರ್ದೇಶಕ-ನೃತ್ಯ ಸಂಯೋಜಕ ಪ್ರಭುದೇವ‌, ರಾಮ್ ಚರಣ್ ಅವರು ಹೊಸ ಚಲನಚಿತ್ರದ ಸೆಟ್ ನಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.

ಸದ್ಯ ರಾಮ್ ಚರಣ್ ತಾತ್ಕಾಲಿಕವಾಗಿ RC15 ಎಂಬ ಶೀರ್ಷಿಕೆ ಹೊಂದಿರುವ ತಂಡದಲ್ಲಿ ಕೆಲಸ ಮಾಡ್ತಿದ್ದಾರೆ.

ಚಿತ್ರೀಕರಣಕ್ಕೆ ವಾಪಸ್ಸಾದ ಅವರನ್ನು ಚಿತ್ರತಂಡ ವಿಭಿನ್ನವಾಗಿ ಸ್ವಾಗತಿಸಿ ಖುಷಿ ನೀಡಿದೆ. ಈ ವಿಡಿಯೋವನ್ನ ನಟ ರಾಮ್ ಚರಣ್ ಹಂಚಿಕೊಂಡಿದ್ದು , ಅವರ ಪತ್ನಿ ಉಪಾಸನಾ ಕೂಡ ಇನ್ ಸ್ಟಾ ಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read