ಸಾಲ ತೀರಿಸಲು 9 ಸಾವಿರಕ್ಕೆ ಮಗು ಮಾರಿದ ಮಹಿಳೆ

ಪಾಟ್ನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಡತನದಿಂದ ಬಳಲುತ್ತಿರುವ ಮಹಿಳೆಯೊಬ್ಬರು ತನ್ನ ಬ್ಯಾಂಕ್ ಸಾಲವನ್ನು ಮರುಪಾವತಿಸಲು ತನ್ನ ಮಗುವನ್ನು 9 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಮಗುವನ್ನು ಅವರ ಸಂಬಂಧಿಕರ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಮೂಲದ ಮಹಿಳೆಗೆ ಹಸ್ತಾಂತರಿಸುವ ಮೊದಲು ಅಲ್ಲಿ ಮಗುವನ್ನು ಇರಿಸಲಾಗಿತ್ತು. ಆ ಮಹಿಳೆ ಮಗುವಿನ ಹುಡುಕಾಟದಲ್ಲಿದ್ದರು. ಮಗುವಿಗೆ ಬದಲಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು.

ಮಗುವಿನ ಪೋಷಕರಾದ ಮೊಹಮ್ಮದ್ ಹರೂನ್ ಮತ್ತು ರೆಹಾನಾ ಖಾತೂನ್ ಅವರು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಬಾಲಕನನ್ನು ಶನಿವಾರ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.

ರೆಹಾನಾ ಖಾತೂನ್ ತನ್ನ ಸಹೋದರ ತನ್ವೀರ್ ಮಗುವನ್ನು ಸಹ-ಗ್ರಾಮಸ್ಥ ಮೊಹಮ್ಮದ್ ಆರಿಫ್‌ಗೆ ಮಾರಾಟ ಮಾಡಿದ್ದಾನೆ. ಭಾನುವಾರ 9,000 ರೂ.ಗೆ ಮಾರಾಟ ಮಾಡಿದ್ದ ಬಗ್ಗೆ ಹೇಳಿದ್ದಾನೆ. ತನ್ವೀರ್ ತನ್ನ ಮಗನನ್ನು ಮಾರಾಟ ಮಾಡಲು ಆರೀಫ್‌ನಿಂದ ಪಡೆದ ಮೊತ್ತದ ಬಗ್ಗೆ ತನಗೆ ತಿಳಿದಿಲ್ಲ ಎಂದು ಮಹಿಳೆ ತಿಳಿಸಿದ್ದು, ಆರಿಫ್ 45,000 ರೂ. ಪಡೆದುಕೊಂಡಿದ್ದ ಎನ್ನಲಾಗಿದೆ.

ಈ ಅಪರಾಧಕ್ಕೆ ತನ್ನ ಬಡತನದ ಜೀವನವನ್ನು ದೂಷಿಸಿದ ರೆಹಾನಾ, ಹಣಕಾಸಿನ ಅಡಚಣೆಯಿಂದಾಗಿ 50,000 ರೂ. ಬ್ಯಾಂಕ್ ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ ಮಗುವನ್ನು ಮಾರಾಟ ಮಾಡಲು ಒತ್ತಾಯಿಸಲಾಯಿತು ಎಂದು ಹೇಳಿದ್ದಾಳೆ.

ಖಾಸಗಿ ಫೈನಾನ್ಸ್ ಕಂಪನಿಯಿಂದ ನಾನು ಪಡೆದ ಸಾಲದ ಕಂತು ಕಳೆದ ಮೂರು ತಿಂಗಳಿಂದ ಬಾಕಿಯಿರುವುದರಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಸಾಲ ನೀಡುವ ಕಂಪನಿಯ ಏಜೆಂಟರು ನಮಗೆ ಕಿರುಕುಳ ನೀಡುತ್ತಿದ್ದರು. ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದರು. ಸಾಲವನ್ನು ಮರುಪಾವತಿಸಲು ಎಂಟು ಮಕ್ಕಳಲ್ಲಿ ಒಬ್ಬರನ್ನು ಮಾರಾಟ ಮಾಡುವಂತೆ ನನ್ನ ಸಹೋದರ ತನ್ವೀರ್ ನನಗೆ ಸಲಹೆ ನೀಡಿದ್ದನೆ ಎಂದು ರೆಹಾನಾ ವಿಚಾರಣೆ ವೇಳೆ ತಿಳಿಸಿದ್ದಾರೆ.

ಅರಾರಿಯಾ ಜಿಲ್ಲೆಯ ರಾಣಿಗಂಜ್ ಬ್ಲಾಕ್‌ನ ಪಚಿರಾ ಪಂಚಾಯತ್‌ನಲ್ಲಿ ವಾಸಿಸುವ ದಂಪತಿಗೆ ಎಂಟು ಮಕ್ಕಳಿದ್ದಾರೆ. ಐದು ಗಂಡು ಮತ್ತು ಮೂವರು ಹೆಣ್ಣುಮಕ್ಕಳು. ಒಂದೂವರೆ ವರ್ಷದ ಗುರ್ಫಾನ್ ಅವರಲ್ಲಿ ಕಿರಿಯ. ಗುರ್ಫಾನ್ ಅವರನ್ನು ಭಾನುವಾರ ಅವರ ತಾಯಿಯ ಚಿಕ್ಕಪ್ಪ ತನ್ವೀರ್ ಅವರ ಮನೆಗೆ ಕಳುಹಿಸಲಾಯಿತು, ಅಲ್ಲಿ ಅವರನ್ನು ದುಮಾರಿಯಾ ನಿವಾಸಿ ಮೊಹಮ್ಮದ್ ಆರಿಫ್ ಅವರಿಗೆ ಹಸ್ತಾಂತರಿಸಲಾಗಿದೆ.

ಆರೀಫ್ ಅವರ ಮನೆಯಿಂದ ಪೊಲೀಸರು ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವನ್ನು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ರಾಣಿಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿರ್ಮಲ್ ಕುಮಾರ್ ಯಡ್ವೆಂದು ತಿಳಿಸಿದ್ದಾರೆ.

‘ಮಗುವಿನ ಪೋಷಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಸತ್ಯಾಸತ್ಯತೆ ಅರಿಯಲು ಇತರ ಕೆಲವು ಸಂಬಂಧಿಕರನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರೆಹಾನಾ ತನ್ನ ಮಗನನ್ನು ಮರಳಿ ಪಡೆಯಲು 9000 ರೂಪಾಯಿಯೊಂದಿಗೆ ಆರಿಫ್ ಮನೆಗೆ ಹೋಗಿದ್ದಳು ಎಂದು ಮಗುವಿನ ಸಂಬಂಧಿ ಅರ್ಸಾದಿ ಹೇಳಿದ್ದಾರೆ. ಆದರೆ ಅವರು(ಆರಿಫ್) ಮಗುವಿಗೆ 45,000 ರೂ ಪಾವತಿಸಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ತಿಳಿದ ನಂತರ ಗ್ರಾಮಸ್ಥರಿಂದ ರೆಹಾನಾ ಹಣವನ್ನು ಸಂಗ್ರಹಿಸಿ ಮಗುವನ್ನು ವಾಪಸ್ ಪಡೆಯಲು ಮುಂದಾಗಿದ್ದಳು ಎನ್ನಲಾಗಿದೆ.

ಮಗುವನ್ನು ದತ್ತು ಪಡೆಯಲು ಇಚ್ಛಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರಿಂದ ಆರಿಫ್ ಅಪಾರ ಹಣ ಪಡೆದಿದ್ದಾಗಿ ಪೊಲೀಸರಿಗೆ ಆಕೆ ತಿಳಿಸಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಿಹಾರದ ಗಡಿ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳಸಾಗಣೆ ಘಟನೆಗಳು ಸಾಮಾನ್ಯ ಲಕ್ಷಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read