ಮೂರನೇ ತಲೆಮಾರಿನ cayenne ಬಿಡುಗಡೆ ಮಾಡಲು ಸಜ್ಜಾದ ಪೋರ್ಶೆ

ಜರ್ಮನಿಯ ಆಟೋಮೊಬೈಲ್ ದಿಗ್ಗಜ ಪೋರ್ಶೆ ತನ್ನ cayenne ಕಾರಿನ ಮೂರನೇ ತಲೆಮಾರಿನ ಮಾಡೆಲ್ ಬಿಡುಗಡೆ ಮಾಡಿದೆ. ಈ ನೂತನ ಮಾಡೆಲ್‌ನ ಪಾದಾರ್ಪಣೆಯು ಚೀನಾದ ಶಾಂಘಾಯ್ ಆಟೋ ಶೋನಲ್ಲಿ ಆಗಲಿದೆ.

ಕಂಫರ್ಟ್, ಡೈನಾಮಿಕ್ಸ್ ಹಾಗೂ ಆಫ್‌-ರೋಡ್ ಕ್ಷಮತೆಗಳಲ್ಲಿ cayenne ಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ.

ಎಚ್‌ಡಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು, ಹೊಸ ಬಾನೆಟ್, ಕ್ರೋಂ ಸ್ಲಾಟ್‌ಗಳೊಂದಿಗೆ ದೊಡ್ಡ ಏರ್‌ ಡ್ಯಾಮ್, ಬಲಿಷ್ಠ ಆರ್ಚ್‌ಗಳು ಹೊಸ ಮಾಡೆಲ್‌ಗೆ ಸೇರ್ಪಡೆಯಾಗಿರುವ ಫೀಚರ್‌ಗಳು. ಮಿಕ್ಕಂತೆ ರೂಫ್ ರೇಲ್‌ಗಳು, 20 ಇಂಚಿನ ಚಕ್ರಗಳು, ವಿಂಡೋ ಲೈನ್‌ಗಳಿಗೆ ಕ್ರೋಮ್‌ ಅಕ್ಸೆಂಟ್‌ಗಳನ್ನು ಸಹ ಸೇರಿಸಲಾಗಿದೆ.

3ಡಿ ಟೇಲ್‌ ಲೈಟ್‌ಗಳು, ದೊಡ್ಡ ಸ್ಪಾಯ್ಲರ್‌, ಅವಳಿ ಎಕ್ಸಾಸ್ಟ್ ಮಫ್ಲರ್‌ ಟಿಪ್‌ಗಳೊಂದಿಗೆ ಬಂಪರ್‌ಗಳೊಂದಿಗೆ ಸ್ಪೋರ್ಟಿ ಏರೋಡೈನಾಮಿಕ್ ಲುಕ್‌ ಪಡೆದಿದೆ ಹೊಸ cayenne.

3-ಸ್ಪೋಕ್ 911 ಸ್ಟಿಯರಿಂಗ್ ಚಕ್ರ, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌‌ ಇರುವ ಅವಳಿ ಸ್ಕ್ರೀನ್, ಹಾಗೂ ಇನ್ಫೋಟೇನ್ಮೆಂಟ್ ವ್ಯವಸ್ಥೆಗಳು ಪೋರ್ಶದ ಒಳಾಂಗಣವನ್ನು ಸುಂದರವಾಗಿಸಿವೆ.

3.0ಲೀ ಅವಳಿ ಟರ್ಬೋ ವಿ6 ಪೆಟ್ರೋಲ್ ಇಂಜಿನ್‌ ಮೂಲಕ 353 ಪಿಎಸ್‌ ಹಾಗೂ 500ಎನ್‌ಎಂ ಶಕ್ತಿಯ ಔಟ್‌ಪುಟ್ ಸಾಮರ್ಥ್ಯ ಹೊಂದಿದೆ ಹೊಸ cayenne ಯ ಬೇಸ್ ಅವತಾರ.

cayenne ಎಸ್‌ನಲ್ಲಿ 4.0ಲೀ ಅವಳಿ ಟರ್ಬೋ ವಿ8 ಪೆಟ್ರೋಲ್ ಇಂಜಿನ್‌ 474ಪಿಎಸ್‌ ಹಾಗೂ 600ಎನ್‌ಎಂ ಶಕ್ತಿ ಉತ್ಪಾದಿಸುತ್ತದೆ. 0-100 ಕಿಮೀಗೆ ತಲುಪಲು ಈ ಕಾರಿಗೆ 4.4 ಸೆಕೆಂಡ್‌ಗಳು ಸಾಕಾಗುತ್ತವೆ.

ಹೈಬ್ರಿಡ್ ಪವರ್‌ಟ್ರೇನ್‌ನಲ್ಲೂ ಲಭ್ಯವಿರುವ ಪೋರ್ಶೆ cayenne 3.0ಲೀ ವಿ6 ಅವಳಿ ಟರ್ಬೋ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್‌ನ ಹೈಬ್ರಿಡ್ ಅವತಾರವನ್ನೂ ಹೊಂದಿದೆ. 20ಕಿವ್ಯಾ ಬ್ಯಾಟರಿ ಪ್ಯಾಕ್‌ನಿಂದ 176ಪಿಎಸ್ ಶಕ್ತಿಯನ್ನು ಈ ಕಾರು ಉತ್ಪಾದಿಸಬಲ್ಲದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read