ಪಟನಾ ನಿಲ್ದಾಣದಲ್ಲಿ ಭಿತ್ತರಗೊಂಡ ನೀಲಿ ಚಿತ್ರ ನನ್ನದಿರಬಹುದೆಂದ ಪೋರ್ನ್‌ ಸ್ಟಾರ್

ಬಿಹಾರದ ಪಟನಾ ರೈಲ್ವೇ ನಿಲ್ದಾಣದಲ್ಲಿ ಮೂರು ನಿಮಿಷಗಳ ಮಟ್ಟಿಗೆ ಅಚಾನಕ್ಕಾಗಿ ವಯಸ್ಕರ ಚಿತ್ರವೊಂದನ್ನು ಮಾಹಿತಿ ಸ್ಕ್ರೀನ್‌ಗಳಲ್ಲಿ ಪ್ರಸಾರ ಆಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಮೀಮರ್‌ಗಳು ಹಾಗೂ ಟ್ರೋಲರ್‌ಗಳಿಗೆ ಭಾರೀ ಆಹಾರವಾಗಿದೆ.

ಜಾಹೀರಾತು ತೋರಬೇಕಾದ ಅವಧಿಯಲ್ಲಿ ನಿಲ್ದಾಣದಲ್ಲಿದ್ದ ಎಲ್‌ಸಿಡಿ ಪರದೆಗಳ ಮೇಲೆ ಮೂರು ನಿಮಿಷಗಳ ಮಟ್ಟಿಗೆ ಹೀಗೊಂದು ಅಚಾತುರ್ಯ ನಡೆದು ಹೋಗಿದೆ. ಆ ಸಂದರ್ಭದಲ್ಲಿ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಜಾಹೀರಾತು ಪರದೆಗಳ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ನೋಡ ನೋಡುತ್ತಲೇ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಪಾಶ್ಚಾತ್ಯ ಜಗತ್ತಿನಲ್ಲೂ ಸದ್ದು ಮಾಡುತ್ತಿರುವ ಈ ವಿಚಾರದ ಬಗ್ಗೆ ಖುದ್ದು ಪೋರ್ನ್ ತಾರೆ ಕೆಂಡ್ರಾ ಲಸ್ಟ್ ಪತ್ರಿಕ್ರಿಯಿಸಿದ್ದಾರೆ. ತಮ್ಮದೊಂದು ಚಿತ್ರದೊಂದಿಗೆ ಹ್ಯಾಶ್‌ಟ್ಯಾಗ್ ಹಾಕಿ ಬಿಹಾರ ರೈಲ್ವೇ ನಿಲ್ದಾಣ ಎಂದು ಟ್ವೀಟ್ ಮಾಡಿರುವ ಕೆಂಡ್ರಾ, ನಿಲ್ದಾಣದಲ್ಲಿ ಬಿತ್ತರಗೊಂಡ ಕ್ಲಿಪ್ ತನ್ನದಾಗಿರಲಿ ಎಂದು ಆಶಿಸುವುದಾಗಿ ಹೇಳಿ ದೇಸೀ ಪಡ್ಡೆಗಳ ಎದೆಗೆ ಬೆಂಕಿ ಇಟ್ಟಿದ್ದಾರೆ.

ಪ್ರಕರಣ ಸಂಬಂಧ ಸರ್ಕಾರೀ ರೈಲ್ವೇ ಪೊಲೀಸ್‌ (ಜಿಆರ್‌ಪಿ) ಹಾಗೂ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್‌) ಬಳಿ ದೂರು ದಾಖಲಿಸಲಾಗಿದೆ. ಪ್ರಕರಣದ ಸೂಕ್ಷ್ಮ ಅವಲೋಕನ ಮಾಡಿದ ರೈಲ್ವೇ ಅಧಿಕಾರಿಗಳು ನಿಲ್ದಾಣದ ಪರದೆಗಳ ಮೇಲೆ ಜಾಹೀರಾತು ಬಿತ್ತರಿಸಲು ಏಜೆನ್ಸಿಯೊಂದಕ್ಕೆ ನೀಡಿದ್ದ ಕಾಂಟ್ರಾಕ್ಟ್‌ ಅನ್ನು ರದ್ದು ಪಡಿಸಿದ್ದಾರೆ.

https://twitter.com/KendraLust/status/1637863680443310080?ref_src=twsrc%5Etfw%7Ctwcamp%5Etweetembed%7Ctwterm%5E1637863680443310080%7Ctwgr%5Ed879f4e5b55faefedf344b89134a7cb4e0bff2c7%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fporn-star-kendra-lust-hopes-that-clip-played-at-patna-railway-station-was-hers

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read