ಪ್ರಾಣಿಗಳು ತಮ್ಮ ಮರಿಗಳನ್ನು ಜೋಪಾನವಾಗಿ ರಕ್ಷಣೆ ಮಾಡುತ್ತವೆ. ಅವುಗಳ ಮೇಲೆ ದಾಳಿ ಮಾಡಿದಾಗಲಂತೂ ಯುದ್ಧಕ್ಕೆ ನಿಂತವರಂತೆ ಹೋರಾಡುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಮತ್ತು ಮುಳ್ಳುಹಂದಿಗಳ ಕುಟುಂಬದ ನಡುವಿನ ಹೋರಾಟವನ್ನು ಸೆರೆಹಿಡಿಯುವ ವೀಡಿಯೊ ವೈರಲ್ ಆಗಿದೆ.
ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ಕ್ಲಿಪ್‌ನಲ್ಲಿ, ಎರಡು ಮುಳ್ಳುಹಂದಿಗಳು ತಮ್ಮ ಮರಿಗಳೊಂದಿಗೆ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿವೆ.
ಸ್ವಲ್ಪ ಸಮಯದ ನಂತರ ಚಿರತೆ ಅವುಗಳ ಬಳಿಗೆ ಬಂದು ಮುಳ್ಳುಹಂದಿ ಮರಿಗಳನ್ನು ಹಿಡಿಯಲು ಪ್ರಯತ್ನಿಸುತ್ತದೆ. ಆದಾಗ್ಯೂ, ವಯಸ್ಕ ಮುಳ್ಳುಹಂದಿಗಳು ತಮ್ಮ ಮರಿಗಳನ್ನು ಚಿರತೆಯಿಂದ ರಕ್ಷಿಸಲು ಗುರಾಣಿ ಹಿಡಿದು ಹೋರಾಡುವಂತೆ ಸ್ವಯಂ ಬೇಲಿ ರೂಪಿಸುತ್ತವೆ. ಆದರೆ ಚಿರತೆ, ಮರಿಗಳನ್ನು ತಲುಪಲು ಪ್ರಯತ್ನಿಸುತ್ತಲೇ ಇರುತ್ತದೆ.
“ಮುಳ್ಳುಹಂದಿ ಪೋಷಕರು ತಮ್ಮ ಮಗುವಿಗೆ ಚಿರತೆಯಿಂದ Z ವರ್ಗದ ಭದ್ರತೆಯನ್ನು ಒದಗಿಸುತ್ತಿವೆ, ವೀರಾವೇಶದಿಂದ ಹೋರಾಡುತ್ತವೆ ಮತ್ತು ಚಿರತೆ, ಮುಳ್ಳುಹಂದಿಯ ಮರಿಗಳನ್ನು ಮುಟ್ಟುವ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುತ್ತವೆ. ಅತ್ಯಂತ ನಂಬಲಾಗದ ಘಟನೆ” ಎಂದು ಸುಪ್ರಿಯಾ ಸಾಹು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋವನ್ನ ಅಧಿಕ ಮಂದಿ ವೀಕ್ಷಿಸಿದ್ದು ಮುಳ್ಳುಹಂದಿಗಳ ಹೋರಾಟವನ್ನು ಶ್ಲಾಘಿಸಿದ್ದಾರೆ.
https://twitter.com/supriyasahuias/status/1616295159368646656?ref_src=twsrc%5Etfw%7Ctwcamp%5Etweetembed%7Ctwterm%5E1616295159368646656%7Ctwgr%5E5bdad0cd803d188775ab4aac1b119096255ccbc5%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-porcupines-z-class-security-to-save-babies-from-leopard-attack-3711719
https://twitter.com/supriyasahuias/status/1616295159368646656?ref_src=twsrc%5Etfw%7Ctwcamp%5Etweetembed%7Ctwterm%5E1616296095780573186%7Ctwgr%5E5bdad0cd803d188775ab4aac1b119096255ccbc5%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fwatch-porcupines-z-class-security-to-save-babies-from-leopard-attack-3711719