ಕಚೇರಿಯನ್ನೇ ಮದ್ಯದಂಗಡಿ ಮಾಡಿಕೊಂಡ ಪೊಲೀಸರು…….. ಶಾಕಿಂಗ್ ವಿಡಿಯೋ ವೈರಲ್…!

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪೊಲೀಸರು ತಲೆತಗ್ಗಿಸುವ ಘಟನೆ ನಡೆದಿದೆ. ಕಚೇರಿಯಲ್ಲೇ ಪೊಲೀಸರು ಮದ್ಯ ಸೇವನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಡಯಲ್ 112 ಪೊಲೀಸರು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕಚೇರಿಯನ್ನು ಮದ್ಯದಂಗಡಿಯಾಗಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮೇಜಿನ ಮೇಲೆ ಮದ್ಯದ ಬಾಟಲಿ ಜೊತೆ ನೀರಿನ ಬಾಟಲಿ, ಆಹಾರವಿದೆ.

ಡಯಲ್ 112 ಪೊಲೀಸ್ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸರು ಮದ್ಯ ಸೇವಿಸುತ್ತಿದ್ದಾರೆ. ವೀಡಿಯೊದಲ್ಲಿ, ಒಬ್ಬ ಪೊಲೀಸ್ ಗ್ಲಾಸ್‌ಗೆ ಮದ್ಯ  ಹಾಕ್ತಿರೋದನ್ನು ನೋಡಬಹುದು. ವೀಡಿಯೊದಲ್ಲಿ ಮೂರು ಜನರಿದ್ದು,  ಅವರಲ್ಲಿ ಇಬ್ಬರು ಸಮವಸ್ತ್ರದಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಪ್ರಕರಣದ ತನಿಖೆಯನ್ನು ಸಿಒ ಸಿಟಿಗೆ ಹಸ್ತಾಂತರಿಸಲಾಗಿದೆ. ವಿಡಿಯೋ ಶಾಮ್ಲಿಯದ್ದು ಎನ್ನಲಾಗುತ್ತಿದ್ದು, ತನಿಖೆ ನಂತ್ರವೇ ಅದಕ್ಕೆ ಸ್ಪಷ್ಟತೆ ಸಿಗಬೇಕಿದೆ.

https://twitter.com/SachinGuptaUP/status/1813428555600064728?ref_src=twsrc%5Etfw%7Ctwcamp%5Etweetembed%7Ctwterm%5E1813428555600064728%7Ctwgr%5Ecd467a0425249a6b2f3988d2e286c2c376e035fd%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fupviralvideopolicemenseendrinkingalcoholpartyinginsideofficeofdial112whileondutyinshamli-newsid-n622418672

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read