ಅರ್ಧ ಕಾರು ಚಾಲನೆ ಮಾಡಿದ ಮಹಿಳೆಗೆ ಭಾರಿ ದಂಡ

ಮುಂಭಾಗವೇ ಇಲ್ಲದಂತೆ ಕಾಣುತ್ತಿದ್ದ ಕಾರೊಂದನ್ನು ಚಾಲನೆ ಮಾಡಿದ್ದಕ್ಕೆ ಮೆಲ್ಬರ್ನ್‌ನ ಮಹಿಳೆಯೊಬ್ಬರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ನಗರದ ಪಶ್ಚಿಮದಲ್ಲಿರುವ ಸನ್‌ಶೈನ್ ನಾರ್ತ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ 2022 ಹ್ಯೂಂಡಾಯ್ ಪ್ಯಾಲಿಸೇಡ್‌ ಕಾರೊಂದು ವಿಚಿತ್ರವಾಗಿ ಕಂಡಿದೆ.

ಕಾರಿನ ಸ್ಟಿಯರಿಂಗ್ ಹಿಡಿದಿದ್ದ 41 ವರ್ಷದ ಮಹಿಳೆಗೆ ತನ್ನ ಕಾರಿನ ಬಗ್ಗೆ ಚಿಂತೆಯೇ ಇಲ್ಲದಂತೆ ಕಂಡಿದೆ. ವಿಂಡ್‌ಸ್ಕ್ರೀನ್, ಹಿಂದಿನ ಕಿಟಕಿ, ಎಂಜಿನ್ ಮುಚ್ಚಬೇಕಾದ ಪ್ಯಾನೆಲ್‌ಗಳಿಲ್ಲದ ಈ ಕಾರನ್ನು ಕಂಡ ಪೊಲೀಸರು ಬ್ರೈಟನ್‌ನ ನಿವಾಸಿಯಾದ ಈ ಮಹಿಳೆಗೆ ’ಡಿಫೆಕ್ಟ್‌ ನೋಟಿಸ್’ ಜಾರಿ ಮಾಡಿದ್ದು, ಆಕೆಯ ವಾಹನ ಪ್ರಯಾಣ ಮಾಡಲು ಅಸುರಕ್ಷಿತವಾಗಿದ್ದು, ಮತ್ತೆ ರಸ್ತೆಗಿಳಿಸದಂತೆ ಸೂಚಿಸಲಾಗಿದೆ.

ಇಷ್ಟಾದರೂ ತನ್ನ ಕಾರನ್ನು ಬಿಡದ ಈ ಮಹಿಳೆ ಶನಿವಾರ ಮಧ್ಯಾಹ್ನ ಮತ್ತೊಮ್ಮೆ ಅದೇ ಕಾರಿನಲ್ಲಿ ರಸ್ತೆಗಿಳಿದಿದ್ದಾಳೆ. ಪುನರಾವರ್ತಿತ ಪ್ರಮಾದದಲ್ಲಿ ಈ ಬಾರಿ ಆಸ್ಟ್ರೇಲಿಯನ್ $740 ದಂಡ ತೆತ್ತಿದ್ದಲ್ಲದೇ, ನೋಟಿಸ್‌ ಅನ್ನೇ ಉಲ್ಲಂಘನೆ ಮಾಡಿರುವ ಕಾರಣ ತನ್ನ ಚಾಲನಾ ಪರವಾನಿಗೆಯನ್ನೂ ಕಳೆದುಕೊಂಡಿದ್ದಾಳೆ.

ಈ ವಾಹನದ ಚಿತ್ರವನ್ನು ವಿಕ್ಟೋರಿಯಾ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ಮನೆ ಬಿಡುವ ಮುನ್ನದ ಚೆಕ್‌ಲಿಸ್ಟ್‌: ಕೀಲಿಗಳು? ಚೆಕ್ ಮಾಡಿ. ವ್ಯಾಲೆಟ್‌? ಚೆಕ್ ಮಾಡಿ. ಕಾರಿನ ಮುಂಬದಿ? ಖಾಲಿ” ಎಂದು ವಿನೋದಮಯವಾಗಿ ಕ್ಯಾಪ್ಷನ್ ಕೊಟ್ಟಿದ್ಧಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read