ಹಾಸನ : ಚಲಿಸುತ್ತಿದ್ದ ಬೈಕ್’ ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟ ಘಟನೆ ಹಾಸನ ಹೊರವಲಯದ ಕೆಂಚನಹಳ್ಳಿ ಬಳಿ ನಡೆದಿದೆ.
ಮೃತರನ್ನು ಪ್ರಕಾಶ್ (38) ಎಂದು ಗುರುತಿಸಲಾಗಿದೆ.ಪ್ರಶಾಂತ್ ಅವರು 11 ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ತವ್ಯಕ್ಕೆ ಬೈಕ್ ನಲ್ಲಿ ಗಾಡೇನಹಳ್ಳಿಗೆ ತೆರಳುತ್ತಿದ್ದಾಗ ಬೈಕ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
TAGGED:ಪೊಲೀಸ್ ಕಾನ್ಸ್ಟೇಬಲ್