SHOCKING : ಪತ್ರಕರ್ತನಿಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಪೊಲೀಸರು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ಪಂಜಾಬ್ : ಪತ್ರಕರ್ತನಿಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ಪೊಲೀಸರು ಹಲ್ಲೆ ನಡೆಸಿರುವ ಆಘಾತಕಾರಿ ಪಂಜಾಬ್ನ ಬಟಾಲಾದಲ್ಲಿ ನಡೆದಿದ್ದು, ಆಘಾತಕಾರಿ ವೀಡಿಯೋ ವೈರಲ್ ಆಗಿದೆ.

ಪತ್ರಕರ್ತ ಬಲ್ವಿಂದರ್ ಕುಮಾರ್ ಭಲ್ಲಾ ಅವರ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಆಘಾತಕಾರಿ ಪೊಲೀಸ್ ದೌರ್ಜನ್ಯ ಪ್ರಕರಣ ನಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಡೇರಾ ರಸ್ತೆಯಲ್ಲಿ ಹಾಡಹಗಲೇ ಸಬ್-ಇನ್ಸ್ಪೆಕ್ಟರ್ಗಳಾದ ಮಂದೀಪ್ ಸಿಂಗ್ ಮತ್ತು ಸುರ್ಜಿತ್ ಸಿಂಗ್ ಪತ್ರಕರ್ತನನ್ನು ಎಳೆದುಕೊಂಡು ನಿರ್ದಯವಾಗಿ ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಭಲ್ಲಾ ಅವರನ್ನು ಥಳಿಸಿ, ರಸ್ತೆಯಲ್ಲಿ ಎಳೆದುಕೊಂಡು ಹೋಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಡಲಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆ ಆಗಸ್ಟ್ 1 ರಂದು ನಡೆದಿತ್ತು. ಮೂಲಗಳ ಪ್ರಕಾರ, ಆರೋಪಿಗಳಾದ ಇಬ್ಬರೂ ಅಧಿಕಾರಿಗಳು ಭಟಿಂಡಾದ 5 ನೇ ಕಮಾಂಡೋ ಬೆಟಾಲಿಯನ್ನಲ್ಲಿ ನಿಯೋಜನೆಗೊಂಡಿದ್ದು, ಬಟಾಲಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯದಲ್ಲಿದ್ದರು ಎಂದು ವರದಿಯಾಗಿದೆ. ಬಟಾಲಾ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯು ಗುರುನಾನಕ್ ನಗರದ ನಿವಾಸಿ ಸುರ್ಜಿತ್ ಸಿಂಗ್ ಮತ್ತು ಬಟಿಂಡಾದ ಹೌಸಿಂಗ್ ಬೋರ್ಡ್ ಕಾಲೋನಿಯ ಮಂದೀಪ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read