ನನ್ನ ಜನ್ಮ ಜೈವಿಕವಾಗಿದೆ ಎಂದು ಭಾವಿಸಿಲ್ಲ. ಬದಲಾಗಿ ಒಂದು ಉದ್ದೇಶವನ್ನು ಸಾಧಿಸಲು, ಧ್ಯೇಯವನ್ನು ಪೂರೈಸಲು ದೇವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಹೇಳಿರುವ ಪ್ರಧಾನಿಯ ಈ ಮಾತು ಇತ್ತೀಚಿಗೆ ಭಾರೀ ವೈರಲ್ ಆಗ್ತಿದೆ.
ನ್ಯೂಸ್ 18 ಇಂಡಿಯಾದ ರುಬಿಕಾ ಲಿಯಾಖತ್ ಅವರೊಂದಿಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಈ ಹೇಳಿಕೆ ವ್ಯಾಪಕವಾಗಿ ಹರಡ್ತಿದೆ. “ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ, ದೇವರು ತನ್ನ ಕೆಲಸವನ್ನು ಮಾಡಲು ನನ್ನನ್ನು ಕಳುಹಿಸಿದ್ದರಿಂದ ನಾನು ಈ ಶಕ್ತಿಯನ್ನು ಪಡೆಯುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.
ಸತತವಾಗಿ ಕೆಲಸ ಮಾಡುತ್ತಿದ್ದರೂ ನಿಮ್ಮಲ್ಲಿ ಬಳಲಿಕೆ ಕಾಣುವುದಿಲ್ಲ, ನೀನು ಸುಸ್ತಾಗದಿರುವುದರ ಹಿಂದಿನ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಈ ರೀತಿ ಉತ್ತರಿಸಿದ್ದಾರೆ. ನರೇಂದ್ರ ಮೋದಿಯವರ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಕೋಲಾಹಲಕ್ಕೆ ಕಾರಣವಾಗಿದೆ.
https://twitter.com/RubikaLiyaquat/status/1792817819018780833?ref_src=twsrc%5Etfw%7Ctwcamp%5Etweetembed%7Ctwterm%5E1792817819018780833%7Ctwgr%5E4108ad4fbaf58869056addf1e523beee8b6c8f99%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fpmnarendramodisaysiamconvincediamnotbornbiologicallygettingthisenergyasgodsentmetodohisworkwatchvideoofprimeministersviralinterviewwithrubikaliyaquat-newsid-n610700638