BIG NEWS: ಲಕ್ಷ ಕಂಠ ಗೀತಾ ಪಾರಾಯಣ ಪಠದ ಬಳಿಕ ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ ಮಾಡಿದ ‘ನವ ಸಂಕಲ್ಪ’ಗಳೇನು?

ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆಯ ಕೆಲ ಶ್ಲೋಕಗಳನ್ನು ಪಠಣ ಮಾಡಿದರು. ಇದೇ ವೇಳೆ ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ನವ ಸಂಕಲ್ಪ ಮಾಡುವಂತೆ ಕರೆ ನೀಡಿದರು.

ಕೃಷ್ಣನೂರಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಎಲ್ಲರೂ ಈ 9 ಸಂಕಲ್ಪಗಳನ್ನು ಮಾಡಿ. ಇವುಗಳು ವರ್ತಮಾನ ಹಾಗೂ ಭವಿಷ್ಯಕ್ಕೆ ಅಗತ್ಯ ಎಂದು ಹೇಳಿದರು.

  • ಜಲ ಸಂರಕ್ಷಣೆ
  • ಮರ ಬೆಳೆಸುವುದು- ತಾಯಿ ಹೆಸರಲ್ಲಿ ಒಂದು ಮರ ಅಭಿಯಾನ
  • ಪ್ರತಿಯೊಬ್ಬರೂ ಓರ್ವ ಬಡವನ ಜೀವನ ಸುಧಾರಿಸಿ
  • ಸ್ವದೇಶಿ ಮಂತ್ರ- ವೋಕಲ್-ಲೋಕಲ್ ಮಂತ್ರ ನಮ್ಮದಾಗಿಸಿ
  • ನೈಸರ್ಗಿಕ ಕೃಷಿ
  • ಆರೋಗ್ಯಪೂರ್ಣ ಜೀವನ ಶೈಲಿ- ಊಟದಲ್ಲಿ ಎಣ್ಣೆ ಅಂಶ ಕಡಿಮೆ- ಸಿರಿಧಾನ್ಯಗಳ ಬಳಕೆ ಹೆಚ್ಚಳ
  • ಜೀವನದಲ್ಲಿ ಯೋಗಾ ಅಳವಡಿಕೆ
  • ಹಸ್ತಪ್ರತಿ ಸಂರಕ್ಷಣೆ (ತಾಳೆಗರಿ)
  • ದೇಶದ ೨೫ ಪುಣ್ಯ ಕ್ಷೇತ್ರಗಳ ದರ್ಶನ ಮಾಡುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು.

2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಪ್ರತಿಯೊಬ್ಬ ಭಾರತೀಯನು ತನ್ನ ಕರ್ತವ್ಯಗಳನ್ನು ನಿಭಾಯಿಸಬೇಕು. ವಿಕಸಿತ ಕರ್ನಾಟಕ: ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read