ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮುಂಬೈ ಮೆಟ್ರೋದ ಎರಡು ಮಾರ್ಗಗಳಿಗೆ ಚಾಲನೆ ನೀಡಿದ್ದು, ಬಳಿಕ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವ ಜನತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
12600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಲೈನ್ 2ಎ ಹಾಗೂ ಲೈನ್ 7 ಉದ್ಘಾಟನೆ ನೆರವೇರಿಸಲಾಗಿದ್ದು,18.6 ಕಿಲೋಮೀಟರ್ ಉದ್ದದ ಲೈನ್ 2 ಎ ದಹಿಸರ್ ನಿಂದ ಡಿಎನ್ ನಗರದವರೆಗೆ ಸಂಚರಿಸಲಿದೆ. 16.5 ಕಿಲೋ ಮೀಟರ್ ಉದ್ದದ ಲೈನ್ 7 ಅಂಧೇರಿ ಈಸ್ಟ್ ನಿಂದ ದಹಿಸರ್ ವರೆಗೆ ಸಂಚರಿಸಲಿದೆ.
ನರೇಂದ್ರ ಮೋದಿಯವರು ಈ ಎರಡೂ ಮಾರ್ಗಗಳ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೊದಲಾದವರಿದ್ದರು. ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಮೆಟ್ರೋದಲ್ಲಿ ಸಂಚರಿಸಿದ್ದು, ಈ ವೇಳೆ ಯುವ ಜನತೆ, ಮಹಿಳೆಯರು ಹಾಗೂ ಮೆಟ್ರೋ ರೈಲ್ ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದಾರೆ.
https://twitter.com/DDNewslive/status/1616071903722246148?ref_src=twsrc%5Etfw%7Ctwcamp%5Etweetembed%7Ctwterm%5E1616071903722246148%7Ctwgr%5E63d131fc7e9059a0b1741718b92d9b8740c836a9%7Ctwcon%5Es1_&ref_url=https%3A%2F%2Fwww.timesnownews.com%2Findia%2Fwatch-pm-modi-takes-metro-ride-in-mumbai-interacts-with-youngsters-article-97141159
https://twitter.com/DDNewslive/status/1616073012721364992?ref_src=twsrc%5Etfw%7Ctwcamp%5Etweetembed%7Ctwterm%5E1616073012721364992%7Ctwgr%5E63d131fc7e9059a0b1741718b92d9b8740c836a9%7Ctwcon%5Es1_&ref_url=https%3A%2F%2Fwww.timesnownews.com%2Findia%2Fwatch-pm-modi-takes-metro-ride-in-mumbai-interacts-with-youngsters-article-97141159