ಜಪಾನ್ ಪ್ರಧಾನಿಯೊಂದಿಗೆ ಬುಲೆಟ್ ರೈಲಲ್ಲಿ ಮೋದಿ ಸವಾರಿ: ಭಾರತದಲ್ಲಿ ಬುಲೆಟ್ ರೈಲು ಆರಂಭದ ಬಗ್ಗೆ ಮಹತ್ವದ ಚರ್ಚೆ  

ಟೋಕಿಯೋ: ಜಪಾನ್ ಪ್ರಧಾನಿ ಇಶಿಬಾ ಅವರೊಂದಿಗೆ ಪ್ರಧಾನಿ ಮೋದಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಇದೇ ವೇಳೆ ಭಾರತದಲ್ಲಿ ಬುಲೆಟ್ ರೈಲು ಆರಂಭದ ಕುರಿತಾಗಿ ಭಾರತೀಯ ನಿರ್ವಾಹಕರೊಂದಿಗೆ ಸಂವಾದ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಇತರ ಅಧಿಕಾರಿಗಳೊಂದಿಗೆ ಸೆಂಡೈಗೆ ಬುಲೆಟ್ ರೈಲು ಪ್ರಯಾಣ ಮಾಡಿದರು. ಈ ಭೇಟಿ ವಿಶೇಷವಾಗಿ ಅಮೆರಿಕದೊಂದಿಗಿನ ವ್ಯಾಪಾರಸಂಬಂಧಿತ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಹಲವಾರು ವಿಧಗಳಲ್ಲಿ ಮುಖ್ಯವಾಗಿದೆ.

ಪ್ರಧಾನಿ ಮೋದಿ ಅವರೊಂದಿಗೆ ಸೆಂಡೈಗೆ ಪ್ರಯಾಣ ಎಂದು ಇಶಿಬಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಭಾರತವು ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಜಾಲವನ್ನು ನಿರ್ಮಿಸುತ್ತಿರುವುದರಿಂದ, ಆಲ್ಫಾ-ಎಕ್ಸ್ ರೈಲಿನ ಕುರಿತು ಪ್ರಧಾನಿ ಮೋದಿ ವಿವರಣೆಯನ್ನು ಪಡೆದರು.

ಪ್ರಯಾಣದ ಮೊದಲು, ಪ್ರಧಾನಿ ಮೋದಿ ಪ್ರಸ್ತುತ ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ರೈಲು ಚಾಲಕರನ್ನು ಭೇಟಿಯಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read