BREAKING : ಪ್ರಧಾನಿ ಮೋದಿಯಿಂದ ‘PM KISAN’ 20 ನೇ ಕಂತಿನ ಹಣ ಬಿಡುಗಡೆ : 9.7 ಕೋಟಿ ರೈತರ ಬ್ಯಾಂಕ್ ಖಾತೆಗೆ ಜಮಾ.!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು , ಪಿಎಂ-ಕಿಸಾನ್ ನ 20 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಹೌದು,   ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತಿನ 20000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ.

ದೇಶಾದ್ಯಂತ 9.7 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,500 ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ. ಇದು ಯೋಜನೆಯಡಿ ಒಟ್ಟು ವಿತರಣೆಯನ್ನು 3.90 ಲಕ್ಷ ಕೋಟಿ ರೂ. ಮೀರಿಸುತ್ತದೆ.

19 ನೇ ಕಂತಿನ ಹಣ ಜಮಾ ಆಗದಿದ್ದರೆ ಪಿಎಂ ಕಿಸಾನ್ ಗೆ ಎಚ್ಚರಿಕೆ ನೀಡಿ ದೂರು ನೀಡಬಹುದು. ಪಿಎಂ ಕಿಸಾನ್ ಸಮ್ಮಾನ್ ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ ದೂರು ನೀಡಲು ಅವಕಾಶ ನೀಡಿದೆ. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266, 155261 ಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದು. ನೀವು ಈ ಮೇಲ್ ಐಡಿ pmkisan-ict@gov.in ಅನ್ನು ಸಹ ಸಂಪರ್ಕಿಸಬಹುದು .

ಕೇಂದ್ರ ಯೋಜನೆಯಾದ ಪಿಎಂ ಕಿಸಾನ್ ಯೋಜನೆ ಕೋಟ್ಯಂತರ ರೈತರಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ಪ್ರಯೋಜನವನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೀಡುತ್ತದೆ.ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ನೋಂದಾಯಿತ ರೈತರು ಇ-ಕೆವೈಸಿ ಮಾಡುವುದು ಅತೀ ಅವಶ್ಯಕವಾಗಿದ್ದು, ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಬರುತ್ತದೆ. ರಾಜ್ಯ ಸರ್ಕಾರ ಮುಖ ದೃಢೀಕರಣ ಘೋಷಿಸಿದೊಂದಿಗೆ (ಫೇಸ್ ಅಥೆಂಟಿಕೇಷನ್ ಆಪ್ ಇ–ಕೆವೈಸಿ) ಪಿ.ಎಂ. ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ರೈತರು ಈ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿ ಇ-ಕೆವೈಸಿ ಮಾಡಿಕೊಳ್ಳಬಹುದು. ಇತರೆ ರೈತರು ಇ-ಕೆವೈಸಿ ಮಾಡಿಸಲು ಸಹಾಯ ಮಾಡಬಹುದು. ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸೇವಾ ಸಿಂಧು ಸೆಂಟರ್ಗಳಿಗೆ ಭೇಟಿ ನೀಡಿ ಅಗತ್ಯ ಸೇವೆ ಪಡೆಯಬಹುದು.

ಫಲಾನುಭವಿಗಳ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?

ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಫಲಾನುಭವಿ ಸ್ಥಿತಿ ಪುಟಕ್ಕೆ ಹೋಗಿ.
“ಫಲಾನುಭವಿ ಸ್ಥಿತಿ” ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.
“ಡೇಟಾ ಪಡೆಯಿರಿ” ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಫಲಾನುಭವಿಯ ಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತದೆ.
20 ನೇ ಕಂತಿನ ಹಣವು ಬಿಡುಗಡೆಯಾಗಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ
Step-1: ಮೊದಲಿಗೆ ಈ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
Step-2: ವೆಬ್ಸೈಟ್ ಓಪನ್ ಮಾಡಿ ನಂತರ ಕೆಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. BENIFICIARY LIST ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
Step-3: BENIFICIARY LIST ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ರಾಜ್ಯ ಜಿಲ್ಲೆ, ತಾಲೂಕು, Block ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿ. Get Report ಮೇಲೆ ಕ್ಲಿಕ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read