107 ವರ್ಷದ ವೃದ್ಧೆ ಪಾದಸ್ಪರ್ಶಿಸಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಗ್ಲೋಬಲ್ ಮಿಲ್ಲೆಟ್ಸ್ ಸಮ್ಮೇಳನದಲ್ಲಿ 107 ವರ್ಷದ ಮಹಿಳೆಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ವೃದ್ಧೆಯ ಪಾದಗಳನ್ನು ಸ್ಪರ್ಶಿಸುವ ಮೂಲಕ ಆಶೀರ್ವಾದ ಪಡೆದರು.

ಪ್ರಧಾನಿ ಮೋದಿಯವರಿಗೆ ಶಾಲು ಹೊದಿಸಿ ವೃದ್ಧೆ ಸನ್ಮಾಸುತ್ತಿದ್ದಂತೆ ಪ್ರಧಾನಿ ಮೋದಿ ಅವರ ಕಾಲುಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡು ನಮಸ್ಕರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 18ರಂದು ರಾಷ್ಟ್ರ ರಾಜಧಾನಿಯಲ್ಲಿ ರಾಗಿ ಕುರಿತ ಎರಡು ದಿನಗಳ ಗ್ಲೋಬಲ್ ಮಿಲ್ಲೆಟ್ಸ್ ಸಮ್ಮೇಳನವನ್ನು ಉದ್ಘಾಟಿಸಿದರು.

ಅವರು 2023 ರಲ್ಲಿ ಆಚರಿಸಲಾಗುವ ‘ಅಂತಾರಾಷ್ಟ್ರೀಯ ರಾಗಿ ವರ್ಷವನ್ನು ಗುರುತಿಸಲು ಕಸ್ಟಮೈಸ್ ಮಾಡಿದ ಪೋಸ್ಟಲ್ ಸ್ಟ್ಯಾಂಪ್ ಮತ್ತು ಸ್ಮರಣಾರ್ಥ ಕರೆನ್ಸಿ ನಾಣ್ಯವನ್ನು ಸಹ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರವು ‘ಶ್ರೀ ಅನ್ನ’ ಎಂದು ಹೆಸರಿಸಲಾದ ರಾಗಿ ಕುರಿತ ವೀಡಿಯೊವನ್ನು ಸಹ ಬಿಡುಗಡೆ ಮಾಡಲಾಯಿತು. ಹೈದರಾಬಾದ್ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR) ಅನ್ನು ಜಾಗತಿಕ ಶ್ರೇಷ್ಠತೆಯ ಕೇಂದ್ರವೆಂದು ಘೋಷಿಸಲಾಯಿತು.

PM Bows Down Before Padma Shri Pappammal, 107-Years Old TN Organic Famer -  All The News From Sikkim, India and The World

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read