ತುಷ್ಟೀಕರಣ ನೀತಿಯಿಂದ ಗಣೇಶೋತ್ಸವಕ್ಕೆ ಅಡ್ಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಆಕ್ರೋಶ

ಕುರುಕ್ಷೇತ್ರ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿರುವ ಪ್ರಧಾನಿ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ಟೀಕಿಸಿದ್ದಾರೆ.

ತುಷ್ಟೀಕರಣ ನೀತಿಯಿಂದಾಗಿ ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ನಾಗಮಂಗಲ ಹಿಂಸೆ ಮತ್ತು ಬೆಂಗಳೂರಿನ ಪ್ರತಿಭಟನೆ ಘಟನೆಗಳನ್ನು ಉದಾಹರಿಸಿದ್ದಾರೆ. ಗಣೇಶನನ್ನು ಪೊಲೀಸರು ಒಯ್ಯುವ ಸ್ಥಿತಿ ಬಂದಿದೆ. ಗಣೇಶನನ್ನು ಕಂಬಿ ಹಿಂದೆ ಇರಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ತಂದ ಜನ ಪಶ್ಚಾತಾಪ ಪಡುತ್ತಿದ್ದಾರೆ. ಒಳ್ಳೆಯ ರಾಜ್ಯವನ್ನು ಹೇಗೆ ಹಾಳು ಮಾಡಬಹುದು ಎನ್ನುವುದನ್ನು ಕಾಂಗ್ರೆಸ್ ಸರ್ಕಾರ ತೋರಿಸುತ್ತಿದೆ. ವಿಘ್ನ ನಿವಾರಕನ ಪೂಜೆಗೂ ವಿಘ್ನ ಸೃಷ್ಟಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read