ಮುಂಗಾರು ಮಳೆಯಿಂದ ಪ್ರವಾಹ, ಭೂಕುಸಿತ, ಜೀವಹಾನಿ: ‘ಮನ್ ಕಿ ಬಾತ್’ನಲ್ಲಿ ಮೋದಿ ದುಃಖ

ನವದೆಹಲಿ: ‘ಮನ್ ಕಿ ಬಾತ್’ ನ 125 ನೇ ಸಂಚಿಕೆಯಲ್ಲಿ ಮಾನ್ಸೂನ್ ಬಿರುಸಿನ ನಡುವೆ ಉಂಟಾದ ವಿನಾಶದ ಬಗ್ಗೆ ಪ್ರಧಾನಿ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಮಾತನಾಡಿ, ದೇಶಾದ್ಯಂತ ನಿರಂತರ ಮಳೆಯಿಂದ ಉಂಟಾದ ಪ್ರವಾಹ, ಭೂಕುಸಿತಗಳಿಂದ ಉಂಟಾದ ವಿನಾಶದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ವಿಕೋಪದ ಸಮಯದಲ್ಲಿ ಜೀವಹಾನಿ ಮತ್ತು ಮೂಲಸೌಕರ್ಯ ನಷ್ಟದ ಬಗ್ಗೆ ಅವರು ನೋವು ವ್ಯಕ್ತಪಡಿಸಿದ್ದಾರೆ.

ಈ ಮಾನ್ಸೂನ್ ಋತುವಿನಲ್ಲಿ, ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ಭಾರಿ ಹಾನಿಯನ್ನು ಕಂಡಿದ್ದೇವೆ. ಮನೆಗಳು ಛಿದ್ರಗೊಂಡಿವೆ, ಹೊಲಗಳು ಮುಳುಗಿವೆ, ಇಡೀ ಕುಟುಂಬಗಳು ನಾಶವಾಗಿವೆ. ನಿರಂತರ ನೀರಿನ ಹರಿವಿನಿಂದ ಸೇತುವೆಗಳು-ರಸ್ತೆಗಳು ಕೊಚ್ಚಿಹೋಗಿವೆ ಮತ್ತು ಜನರ ಜೀವಗಳು ಅಪಾಯದಲ್ಲಿವೆ. ಈ ಘಟನೆಗಳು ಪ್ರತಿಯೊಬ್ಬ ಭಾರತೀಯನನ್ನು ದುಃಖಿತರನ್ನಾಗಿಸಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ನಾವೆಲ್ಲರೂ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

‘ಮನ್ ಕಿ ಬಾತ್’ ನ 124 ನೇ ಆವೃತ್ತಿಯಲ್ಲಿ, ಬಾಹ್ಯಾಕಾಶ ಪರಿಶೋಧನೆ, ವಿಜ್ಞಾನ, ಕ್ರೀಡೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಪರ ಸಾಧನೆಗಳ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆ ವ್ಯಕ್ತಪಡಿಸಿದರು. ಇತ್ತೀಚೆಗೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸ್ವದೇಶಕ್ಕೆ ಮರಳಿ ಬಂದಿರುವುದನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿ ಇದು ದೇಶಕ್ಕೆ ಹೆಮ್ಮೆಯ ಮಹತ್ವದ ಕ್ಷಣ ಎಂದು ಶ್ಲಾಘಿಸಿದರು.

ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಮರಳಿ ಬಂದ ಕ್ಷಣ, ಜನರು ಸಂತೋಷ ವ್ಯಕ್ತಪಡಿಸಿದರು. ಪ್ರತಿಯೊಂದು ಹೃದಯದಲ್ಲೂ ಸಂತೋಷದ ಅಲೆ ಹರಡಿತು. ಇಡೀ ದೇಶವು ಹೆಮ್ಮೆಯಿಂದ ತುಂಬಿತ್ತು ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read