ಕಾಂಗ್ರೆಸ್ ಗೂ ದೆಹಲಿಗೂ ಸಂಬಂಧ ಮುಗಿದಿದೆ: ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಮುಕ್ತಿ ಕೊಡುವ ದಿನ ದೂರವಿಲ್ಲ: ದಾವಣಗೆರೆಯಲ್ಲಿ ಮೋದಿ

ದಾವಣಗೆರೆ: ಕಾಂಗ್ರೆಸ್ ಗೂ ದೆಹಲಿಗೂ ಸಂಬಂಧ ಮುಗಿದು ಹೋಗಿದೆ. ಕರ್ನಾಟಕದ ಜನತೆ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮುಕ್ತಿ ಕೊಡಬೇಕಿದೆ. ಕಾಂಗ್ರೆಸ್ ಪಾಪದ ಕಾರ್ಯಗಳಿಗೆ ಶಿಕ್ಷೆ ಆಗಲಿದೆ ಎಂದು ದಾವಣಗೆರೆಯಲ್ಲಿ ಮತ ಬೇಟೆ ನಡೆಸಿದ ಮೋದಿ ಹೇಳಿದ್ದಾರೆ.

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ನಡೆದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಏಪ್ರಿಲ್ 26ರ ಮತದಾನದಿಂದ ಕಾಂಗ್ರೆಸ್ ದಿಗಿಲುಗೊಂಡಿದೆ ಎಂದು ಹೇಳಿದ್ದಾರೆ.

ಮೊದಲ ಹಂತದಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ರಸ್ತೆಗೆ ಬರುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ದೆಹಲಿಯಿಂದ ದೂರವಾಗಿದ್ದು, ಕರ್ನಾಟಕ ಜನತೆ ಕೂಡ ಕಾಂಗ್ರೆಸ್ ಗೆ ಮುಕ್ತಿ ಕೊಡಬೇಕಿದೆ. ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್ ಹಂತ ಹಂತವಾಗಿ ಅವಸಾನ ಕಾಣುತ್ತಿದೆ. ಇವಿಎಂ ಸರಿಯಿಲ್ಲ ಅನ್ನುವುದಷ್ಟೇ ಅವರ ವಾದ ಎಂದು ಟೀಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read