ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ವೈಶಾಲಿ ರಮೇಶ್‌ಬಾಬು ಅವರನ್ನು ಅಭಿನಂದಿಸಿದ್ದಾರೆ ಮತ್ತು ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯವಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಸಮರ್ಕಂಡ್‌ನಲ್ಲಿ ನಡೆದ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಝೊಂಗಿ ಟಾನ್ ವಿರುದ್ಧ ಕಠಿಣ ಡ್ರಾ ಸಾಧಿಸಿದ ನಂತರ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಸತತ ಎರಡನೇ ಬಾರಿಗೆ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಅನ್ನು ಗೆದ್ದರು ಮತ್ತು ಮಹಿಳಾ ಅಭ್ಯರ್ಥಿಗಳ ಪಂದ್ಯಾವಳಿಗೆ ಅರ್ಹತೆ ಪಡೆದರು.
ಅತ್ಯುತ್ತಮ ಸಾಧನೆ. ವೈಶಾಲಿ ರಮೇಶ್‌ಬಾಬು ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಮೋದಿ ಹೇಳಿದ್ದಾರೆ.
ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ ಸತತ ಎರಡನೇ ಬಾರಿಗೆ ಮಹಿಳೆಯರ ಫಿಡೆ ಗ್ರ್ಯಾಂಡ್ ಸ್ವಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಅವರು ಮುಂಬರುವ ಮಹಿಳೆಯರ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಸೋಮವಾರ ನಡೆದ ಟೂರ್ನಿಯ 11ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ವೈಶಾಲಿ ಅವರು ಮಾಜಿ ವಿಶ್ವ ಚಾಂಪಿಯನ್ ಚೀನಾದ ಝೊಂಗಿ ಟಾನ್ ವಿರುದ್ಧ ಡ್ರಾ ಸಾಧಿಸಿ ಪ್ರಶಸ್ತಿಗೆ ಭಜನಾರಾದರು. ಇದರೊಂದಿಗೆ ಗಳಿಸಲು ಸಾಧ್ಯವಿದ್ದ 11 ಅಂಕಗಳ ಪೈಕಿ 8 ಅಂಕಗಳಿಸಿದ ವೈಶಾಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್ ಡಂನ ಐಸ್ಲೆ ಆಫ್ ಮ್ಯಾನ್ ನಲ್ಲಿ ನಡೆದ 2023ರ ಟೂರ್ನಿಯಲ್ಲಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ ಚಾಂಪಿಯನ್ ಆಗಿದ್ದರು.
Outstanding accomplishment. Congrats to Vaishali Rameshbabu. Her passion and dedication are exemplary. Best wishes for her future endeavours. @chessvaishali https://t.co/0AgnNjRV93
— Narendra Modi (@narendramodi) September 16, 2025