ಪ್ರಧಾನಿ ಮೋದಿಗೆ ಬಾಗಲಕೋಟೆ ಯುವಕನ ಉಡುಗೊರೆ; ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಈ ನಡುವೆ ಪ್ರಧಾನಿ ಮೋದಿ ಅಭಿಮಾನಿಯೊಬ್ಬ ರಕ್ತದಲ್ಲಿ ಚಿತ್ರ ಬಿಡಿಸಿದ್ದು, ಅದನ್ನು ಮೋದಿಯವರಿಗೆ ಉಡುಗೊರೆ ನೀಡಲು ಸಜ್ಜಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಅಭಿಮಾನಿ ಆನಂದ ಭಾರತ ಎಂಬ ಯುವಕ, ಪ್ರಧಾನಿ ಮೋದಿಯವರಿಗಾಗಿ ರಕ್ತದಲ್ಲಿ ಚಿತ್ರ ಬಿಡಿಸಿದ್ದಾನೆ.

ಮೋದಿಯವರ ತಾಯಿ ಹೀರಾಬೆನ್ ಆಶಿರ್ವಾದ ಮಾಡುತ್ತಿರುವ ಚಿತ್ರವನ್ನು ರಕ್ತದಲ್ಲಿ ಬರೆದಿದ್ದು, ಕೇವಲ 13 ಗಂಟೆಯಲ್ಲಿ ಈ ಚಿತ್ರ ತಯಾರಿಸಿದ್ದಾನೆ. ಇಂದು ಈ ಚಿತ್ರವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯನ್ನಾಗಿ ನೀಡಲು ಉತ್ಸುಕನಾಗಿದ್ದಾನೆ.

ಇದೇ ವೇಳೆ ಬಾಗಲಕೋಟೆಯ ನಿವಾಸಿ ನಾಗರತ್ನಾ ಮೇಟಿ ಎಂಬ ವಿದ್ಯಾರ್ಥಿನಿ ವಿಶೇಷ ಚಿತ್ರಪಟವೊಂದನ್ನು ಬಿಡಿಸಿದ್ದು, ಮೋದಿ ತಾಯಿ ಹೀರಾಬೆನ್ ಮೋದಿಯವರಿಗೆ ಸಿಹಿ ತಿನ್ನಿಸುತ್ತಿರುವ ಚಿತ್ರ ಇದಾಗಿದೆ. ವಿದ್ಯಾರ್ಥಿನಿ ಕುಂಚದಲ್ಲಿ ಚಿತ್ರ ಸುಂದರವಾಗಿ ಅರಳಿದೆ. ಈ ಚಿತ್ರಪಟವನ್ನು ಮೋದಿಗೆ ಗಿಫ್ಟ್ ನೀಡಲು ವಿದ್ಯಾರ್ಥಿನಿ ನಿರ್ಧರಿಸಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read