ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಜೀವನದುದ್ದಕ್ಕೂ ಅನುಭವಿಸಬೇಕಾಗಬಹುದು ಸಂಕಷ್ಟ…..!

 

ಹಿಂದೂ ಧರ್ಮದಲ್ಲಿ ದಾನವನ್ನು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಕೂಡ ದಾನಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳ ಬಗ್ಗೆ ಉಲ್ಲೇಖವಿದೆ. ದಾನ ನೀಡುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಅನುಸರಿಸದೇ ಇದ್ದಲ್ಲಿ ಜನ್ಮ ದೋಷಗಳು ಮತ್ತು ಪಾಪಗಳಿಂದ ವ್ಯಕ್ತಿ ರಕ್ಷಿಸಲ್ಪಡುವುದಿಲ್ಲ. ಹಾಗಾಗಿ ದಾನ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳನ್ನು ನೋಡೋಣ.

ಹರಿತವಾದ ವಸ್ತುಗಳನ್ನು ದಾನ ಮಾಡಬೇಡಿ

ಚಾಕು, ಸೂಜಿ ಮತ್ತು ಕತ್ತರಿಗಳಂತಹ ಚೂಪಾದ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ. ಇವುಗಳನ್ನು ಕೊಟ್ಟರೆ ದಾನ ಕೊಡುವವರ ಮತ್ತು ತೆಗೆದುಕೊಳ್ಳುವವರ ನಡುವೆ ತಪ್ಪು ತಿಳುವಳಿಕೆ ಶುರುವಾಗುತ್ತದೆ. ವೈಮನಸ್ಸು ಕೂಡ ಉಂಟಾಗಬಹುದು.

ಪಾತ್ರೆಗಳನ್ನು ದಾನ ಮಾಡಬೇಡಿ

ಎಂದಿಗೂ ಪಾತ್ರೆಗಳನ್ನು ದಾನ ಮಾಡಬಾರದು. ಅದರಲ್ಲೂ ಸ್ಟೀಲ್ ಪಾತ್ರೆಗಳನ್ನು ದಾನವಾಗಿ ಕೊಡಲೇಬಾರದು. ಇದರಿಂದ ಮನೆಯ  ಸುಖ ಶಾಂತಿ ನಿಧಾನವಾಗಿ ದೂರವಾಗತೊಡಗುತ್ತದೆ. ವ್ಯವಹಾರದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ.

ಕೆಟ್ಟುಹೋದ ಆಹಾರವನ್ನು ದಾನ ಮಾಡಬೇಡಿ

ನಿರ್ಗತಿಕರು ಅಥವಾ ಯಾರಿಗೇ ಆಗಿರಲಿ ಹಳಸಿದ, ಕೆಟ್ಟು ಹೋದ ಆಹಾರವನ್ನು ದಾನ ಮಾಡಬಾರದು. ಈ ತಪ್ಪು ಜೀವನದುದ್ದಕ್ಕೂ ಕಾಡಬಹುದು. ಯಾವಾಗಲೂ ತಾಜಾ ಮತ್ತು ಶುದ್ಧ ಆಹಾರವನ್ನು ಮಾತ್ರ ದಾನ ಮಾಡಬೇಕು.

ಪೊರಕೆ ದಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೊರಕೆಯನ್ನು ದಾನವಾಗಿ ಕೊಡಬಾರದು. ಪೊರಕೆ ದಾನ ಮಾಡಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲ ಪೊರಕೆಯನ್ನು ದಾನ ಮಾಡುವುದರಿಂದ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ನೆಲೆಯೂರುತ್ತದೆ.

ದಾನದ ಸಮಯದಲ್ಲಿ ವ್ಯಕ್ತಿಯ ಮನಸ್ಸು ಸಂಪೂರ್ಣವಾಗಿ ಪರಿಶುದ್ಧವಾಗಿರಬೇಕು. ಯಾವಾಗಲೂ ಅಗತ್ಯವಿರುವವರಿಗೆ ಮಾತ್ರ ದಾನ ಮಾಡಬೇಕು. ದಾನದ ಸಮಯದಲ್ಲಿ ನೀಡಿದ ವಸ್ತುವಿಗೆ ಅಗೌರವ ತೋರಬಾರದು.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read