ಜೀವನದ ಜಂಜಾಟಗಳಿಂದ ಹೊರ ಬಂದು ನೆಮ್ಮದಿಯಿಂದಿರಲು ನೆಡಿ ಈ ಗಿಡ

ಶ್ರಾವಣ ಮಾಸ ಕೇವಲ ಶಿವನ ಭಕ್ತಿಯ ದೃಷ್ಟಿಯಿಂದ ವಿಶೇಷವಲ್ಲ. ಆ ತಿಂಗಳನ್ನು ಹೊಸ ಜೀವನದ ಆರಂಭ ಎನ್ನಲಾಗುತ್ತದೆ. ಈ ಸಮಯದಲ್ಲಿ ಸಸಿಗಳನ್ನು ನೆಡುವುದು ಪುಣ್ಯದ ಕೆಲಸ ಎಂದೂ ಅನೇಕರು ಹೇಳ್ತಾರೆ. ಈ ತಿಂಗಳು ಬೆಳೆಸುವ ಕೆಲ ಗಿಡಗಳು ಮನಸ್ಸಿಗೆ, ಮನೆಗೆ ನೆಮ್ಮದಿ ನೀಡುತ್ತವೆ.

ತುಳಸಿ ಗಿಡ : ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಶ್ರಾವಣ ಮಾಸದಲ್ಲಿ ನೆಡುವುದು ಒಳ್ಳೆಯದು. ತುಳಸಿ ಗಿಡದ ಕೆಳಗೆ ಪ್ರತಿನಿತ್ಯ ದೀಪವನ್ನ ಹಚ್ಚುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ ಎಂದು ನಂಬಲಾಗಿದೆ.

ದಾಳಿಂಬೆ ಗಿಡ :  ಶ್ರಾವಣ ತಿಂಗಳಲ್ಲಿ ದಾಳಿಂಬೆ ಗಿಡವನ್ನು ನೆಡುವುದು ಕೂಡ ತುಂಬಾ ಶುಭಕರ. ಆದರೆ ಇದನ್ನು ರಾತ್ರಿಯ ಸಮಯದಲ್ಲಿ ನೆಡಬೇಕು. ಈ ಗಿಡ ಮನೆಯಲ್ಲಿದ್ದರೆ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.

ಬಾಳೆಗಿಡ : ಶ್ರಾವಣ ಮಾಸದ ಗುರುವಾರದಂದು ಹಾಗೆ ಇಲ್ಲ ಏಕಾದಶಿಯಂದು ಬಾಳೆಗಿಡವನ್ನ ನೆಟ್ಟರೆ ತುಂಬಾ ಒಳ್ಳೆಯದು. ಮನೆಯೊಳಗೆ ಬಾಳೆಗಿಡವನ್ನ ನೆಡುವುದು ಶುಭ ಅಲ್ಲ. ಮನೆಯ ಹಿಂದೆ ಗಿಡ ಬೆಳೆಸುವುದು ಒಳ್ಳೆಯದು. ಪ್ರತಿ ನಿತ್ಯ ಬಾಳೆ ಗಿಡಕ್ಕೆ ನೀರು ಹಾಕುವುದ್ರಿಂದ ವೈವಾಹಿಕ ಸಮಸ್ಯೆ ದೂರವಾಗುತ್ತದೆ.

ಬನ್ನಿ ಗಿಡ : ಶ್ರಾವಣ ಮಾಸದ ಶನಿವಾರದಂದು ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಬನ್ನಿ ಗಿಡವನ್ನು ನೆಡಬೇಕು. ಇದು ಶನಿ ದೋಷದಿಂದ ಪರಿಹಾರವನ್ನು ನೀಡುತ್ತದೆ. ಅನೇಕ ಸಮಸ್ಯೆಗಳನ್ನು ನಿವಾರಿಸುತ್ತೆ.

ಆಲದ ಮರ : ಶ್ರಾವಣ ಮಾಸದ ಗುರುವಾರದಂದು ಆಲದ ಮರವನ್ನ ನೆಡಬೇಕು. ಇದು ಮನೆಯಲ್ಲಿ ಸಂತೋಷವನ್ನ ತರುತ್ತದೆ. ಈ ಗಿಡವನ್ನ ಮನೆ ಮುಂದೆ ನೆಡಬಾರದು. ಪಾರ್ಕ್ ಅಥವಾ ದೇವಸ್ಥಾನದಲ್ಲಿ ಬೆಳೆಸಬೇಕು.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read