ಬ್ರೆಜಿಲ್ ನಲ್ಲಿ ಜನವಸತಿ ಪ್ರದೇಶದಲ್ಲೇ ವಿಮಾನ ಪತನ: 62 ಮಂದಿ ಸಾವು

ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ ವಸತಿ ಪ್ರದೇಶದಲ್ಲಿ 62 ಜನರಿದ್ದ ವಿಮಾನ ಪತನವಾಗಿದೆ. ಪತನವಾದ ಕೂಡಲೇ ಬೆಂಕಿ ತಗುಲಿ ವಿಮಾನದಲ್ಲಿದ್ದ ಎಲ್ಲಾ 62 ಮಂದಿ ಮೃತಪಟ್ಟಿದ್ದಾರೆ.

ವಿಮಾನಯಾನ ಸಂಸ್ಥೆ VoePass ಹೇಳಿಕೆಯಲ್ಲಿ 58 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳೊಂದಿಗೆ ಸಾವೊ ಪಾಲೊದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗೌರುಲ್ಹೋಸ್ಗೆ ತೆರಳುತ್ತಿದ್ದ ವಿಮಾನವು ಅಪಘಾತಕ್ಕೀಡಾಗಿದೆ ಎಂದು ದೃಢಪಡಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ಹೇಳಲಾಗಿಲ್ಲ.

ವಿನ್ಹೆಡೊ ನಗರದಲ್ಲಿ ವಿಮಾನ ಬಿದ್ದಿದೆ ಎಂದು ಅಗ್ನಿಶಾಮಕ ದಳದವರು ದೃಢಪಡಿಸಿದ್ದಾರೆ. ಬ್ರೆಜಿಲಿಯನ್ ಟೆಲಿವಿಷನ್ ನೆಟ್‌ವರ್ಕ್ ಗ್ಲೋಬೋನ್ಯೂಸ್ ಮನೆಗಳಿಂದ ತುಂಬಿರುವ ವಸತಿ ಪ್ರದೇಶದಲ್ಲಿ ವಿಮಾನದ ಫ್ಯೂಸ್‌ ಲೇಜ್‌ನಿಂದ ಬೆಂಕಿ ಮತ್ತು ಹೊಗೆ ಹೊರಬರುವ ದೃಶ್ಯದ ತುಣುಕನ್ನು ತೋರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read