ಮನೆಯ ರಕ್ಷಣೆಗೆ ʼಮುಖ್ಯದ್ವಾರʼಕ್ಕೆ ಹಾಕಿ ಈ ವಸ್ತು

ಮನುಷ್ಯರಿಗೆ ಮಾತ್ರವಲ್ಲ, ಮನೆಗೆ, ಅಂಗಡಿಗೆ, ವ್ಯವಹಾರಕ್ಕೆ ದುಷ್ಟರ ಕಣ್ಣು ಬೀಳುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವಕ್ಕೆ ಇವು ಒಳಗಾಗುತ್ತವೆ. ನಕಾರಾತ್ಮಕ ಶಕ್ತಿ ಪ್ರಭಾವದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದ್ರಿಂದ ತಪ್ಪಿಸಿಕೊಳ್ಳಲು ಅನೇಕರು ಮನೆ ಅಥವಾ ಕಚೇರಿ ಮುಂದೆ ವಾಸ್ತು ಪ್ರಕಾರ ವಸ್ತುಗಳನ್ನು ಇಡುತ್ತಾರೆ.

ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದಲ್ಲಿ ಕುದುರೆ ಲಾಳಕ್ಕೆ ಮಹತ್ವದ ಸ್ಥಾನವಿದೆ. ದೃಷ್ಟಿ ದೋಷ ಹಾಗೂ ನಕಾರಾತ್ಮಕ ಶಕ್ತಿಯಿಂದ ಇದು ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿದೆ.

ಹಣ ಬರ್ತಿಲ್ಲ ಅಥವಾ ಬಂದ ಹಣ ಕೈನಲ್ಲಿ ನಿಲ್ಲುತ್ತಿಲ್ಲ ಎಂದಾದ್ರೆ ಕಪ್ಪು ಕುದುರೆ ಲಾಳವನ್ನು ಬಳಸಬೇಕು. ನೌಕರಿ ಸಿಗುತ್ತಿಲ್ಲ ಎನ್ನುವವರು ಕೂಡ ಕಪ್ಪು ಬಟ್ಟೆಯಲ್ಲಿ ಕುದುರೆ ಲಾಳವನ್ನು ಕಟ್ಟಿ ಕಪಾಟಿನಲ್ಲಿಡಬೇಕು.

ಓಡುತ್ತಿರುವಾಗ ಕಟ್ಟಾದ ಕುದುರೆ ಲಾಳ ಬಹಳ ಒಳ್ಳೆಯದು. ಸಾಡೇ ಸಾಥ್ ಶನಿ ಅಥವಾ ಇನ್ನಾವುದೇ ದೋಷ ಪರಿಹಾರಕ್ಕೆ ಆ ಲಾಳದಲ್ಲಿ ಉಂಗುರ ಮಾಡಿ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಶನಿಯ ಕೆಟ್ಟ ಕಣ್ಣಿನಿಂದ ತಪ್ಪಿಸಿಕೊಳ್ಳಲು ಇದು ನೆರವಾಗುತ್ತದೆ.

ಮನೆಯಲ್ಲಿ ಯಶಸ್ಸು ಸಿಗ್ತಿಲ್ಲ ಎನ್ನುವವರು ಮನೆಯ ಮುಂದಿನ ಬಾಗಿಲಿಗೆ ಕಪ್ಪು ಕುದುರೆ ಲಾಳವನ್ನು ಹಾಕಿ. ಕಪ್ಪು ಬಟ್ಟೆಯಲ್ಲಿ ಸುತ್ತಿಡಿ.

ಕಚೇರಿ ಮುಖ್ಯ ಬಾಗಿಲಿಗೂ ಇದನ್ನು ಹಾಕುವುದ್ರಿಂದ ದೃಷ್ಟಿ ದೋಷ ತಗಲುವುದಿಲ್ಲ. ಕಚೇರಿ ವ್ಯವಹಾರದಲ್ಲಿ ವೃದ್ಧಿ ಕಾಣಬಹುದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read