Shocking : ಪಾಸ್‌ಪೋರ್ಟ್ ಮರೆತ ಪೈಲಟ್ ; ಚೀನಾಕ್ಕೆ ಹೊರಟ ವಿಮಾನ ಯು-ಟರ್ನ್ !

ಲಾಸ್ ಏಂಜಲೀಸ್‌ನಿಂದ ಚೀನಾಕ್ಕೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನ, ಪೈಲಟ್ ಪಾಸ್‌ಪೋರ್ಟ್ ಮರೆತಿದ್ದರಿಂದ ದಿಢೀರ್ ಯು-ಟರ್ನ್ ಮಾಡಿದೆ. ಈ ಘಟನೆಯಿಂದಾಗಿ ವಿಮಾನವು ನಿಗದಿತ ಸಮಯಕ್ಕಿಂತ ಆರು ಗಂಟೆಗಳ ನಂತರ ಶಾಂಘೈಗೆ ತಲುಪಿತು. ವಿಮಾನದಲ್ಲಿ 257 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಇದ್ದರು.

ವಿಮಾನವು ಪೆಸಿಫಿಕ್ ಸಾಗರದ ಮೇಲೆ ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಎರಡು ಗಂಟೆಗಳ ನಂತರ, ವಿಮಾನವು ಸ್ಯಾನ್ ಫ್ರಾನ್ಸಿಸ್ಕೋಗೆ ವಾಪಸ್ಸಾಯಿತು. ನಂತರ, ಹೊಸ ಸಿಬ್ಬಂದಿಯೊಂದಿಗೆ ವಿಮಾನ ಚೀನಾಕ್ಕೆ ಹೊರಟಿದೆ.

ಈ ಘಟನೆಯ ನಂತರ, ಯುನೈಟೆಡ್ ಏರ್‌ಲೈನ್ಸ್ ಪ್ರತಿಕ್ರಿಯಿಸಿ, “ಪೈಲಟ್ ತಮ್ಮ ಪಾಸ್‌ಪೋರ್ಟ್ ಅನ್ನು ವಿಮಾನದಲ್ಲಿ ಹೊಂದಿರಲಿಲ್ಲ. ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಹೊಸ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಊಟದ ಕೂಪನ್‌ಗಳು ಮತ್ತು ಪರಿಹಾರವನ್ನು ನೀಡಲಾಗಿದೆ” ಎಂದು ಹೇಳಿದೆ.

ಆದರೆ, ಈ ಪರಿಹಾರದ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್‌ನಲ್ಲಿ ಒಬ್ಬ ಬಳಕೆದಾರರು, “ಏಳು ಗಂಟೆಗಳ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಪ್ರಯಾಣಿಕರಿಗೆ 15 ಡಾಲರ್ ಊಟದ ಕೂಪನ್‌ಗಳನ್ನು ನೀಡಲಾಗಿದೆ” ಎಂದು ಟೀಕಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, “ವಿಮಾನವು ಇಳಿದ ನಂತರ ಏನಾಗುತ್ತದೆ ? ವಿಮಾನ ನಿಲ್ದಾಣದಲ್ಲಿ ಪೈಲಟ್ ಪಾಸ್‌ಪೋರ್ಟ್ ಇಲ್ಲದಿರುವುದು ತಿಳಿದರೆ ? ಪಾಸ್‌ಪೋರ್ಟ್ ಹೊರತುಪಡಿಸಿ, ಪೈಲಟ್‌ಗಳನ್ನು ದೃಢೀಕರಿಸಲು ಬೇರೆ ಮಾರ್ಗವಿಲ್ಲವೇ ?” ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, “ಇದನ್ನು ಅವರ ಪರಿಶೀಲನಾ ಪಟ್ಟಿಗೆ ಸೇರಿಸಬೇಕು. ಅವರು ಎಲ್ಲಾ ರೀತಿಯ ಪರಿಶೀಲನಾ ಪಟ್ಟಿಗಳನ್ನು ಹೊಂದಿದ್ದಾರೆ. ಇದನ್ನೂ ಸೇರಿಸಿ” ಎಂದು ಹೇಳಿದ್ದಾರೆ. ಈ ಘಟನೆಯು ವಿಮಾನಯಾನ ಸಂಸ್ಥೆಯ ಪರಿಶೀಲನಾ ಪ್ರಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Comment
byu/Hungry_Bat_2230 from discussion
innottheonion

Comment
byu/Hungry_Bat_2230 from discussion
innottheonion

Comment
byu/Hungry_Bat_2230 from discussion
innottheonion

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read