ಪುಣ್ಯಕ್ಷೇತ್ರಗಳ ನೋಡಬಯಸುವವರಿಗೆ ಗುಡ್ ನ್ಯೂಸ್: IRCTC ಯಿಂದ ತೀರ್ಥಯಾತ್ರೆ

ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ(ಐ.ಆರ್.ಸಿ.ಟಿ.ಸಿ.) ವತಿಯಿಂದ ಪುಣ್ಯಸ್ಥಳಗಳಿಗೆ ತೀರ್ಥ ಯಾತ್ರೆ ಆಯೋಜಿಸಿದೆ.

ಅ. 10 ರಿಂದ 13 ದಿನಗಳ ಕಾಲ ಚಾರ್ ಧಾಮ್ ಪ್ರವಾಸ ಆರಂಭವಾಗಲಿದೆ. ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ, ದೇವಪ್ರಯಾಗ ಮತ್ತು ಋಷಿಕೇಶ ಒಳಗೊಂಡಿದೆ. ಈ ಪ್ರವಾಸಕ್ಕೆ ಪ್ರತಿಯೊಬ್ಬರಿಗೆ 62,330 ರೂಪಾಯಿ ವೆಚ್ಚವಾಗಲಿದೆ.

ಅ. 18 ರಿಂದ 8 ದಿನಗಳ ಕಾಲ ಗುಜರಾತ್ ಪ್ರವಾಸ ಆರಂಭವಾಗಲಿದೆ. ಹಲವು ಪ್ರದೇಶಗಳನ್ನು ಒಳಗೊಂಡಿರುವ ಈ ಪ್ರವಾಸದ ವೆಚ್ಚ 41,150 ರೂಪಾಯಿ ಆಗಿದೆ.

ಅ. 22 ರಿಂದ 6 ದಿನಗಳ ಕಾಲ ವಾರಣಾಸಿ, ಗಯಾ, ಅಯೋಧ್ಯೆ, ಪ್ರಯಾಗರಾಜ್ ಗೆ ವಿಮಾನ ಪ್ರವಾಸ ಇದೆ. ಅಯೋಧ್ಯೆಯ ಶ್ರೀರಾಮ ಮಂದಿರ, ಪ್ರಯಾಗ್ ರಾಜ್ ನಲ್ಲಿರುವ ತ್ರಿವೇಣಿ ಸಂಗಮ, ಪಾತಾಳಪುರಿ ದೇವಾಲಯಕ್ಕೆ ಭೇಟಿ ನೀಡಲಾಗುವುದು. ಒಬ್ಬರಿಗೆ 36,999 ರೂ. ಪ್ಯಾಕೇಜ್ ಮೊತ್ತವಾಗಿದೆ.

ಈ ಎಲ್ಲಾ ಪ್ಯಾಕೇಜ್ ಗಳಲ್ಲಿಯೂ ವಿಮಾನ ಪ್ರಯಾಣ, 3 ಸ್ಟಾರ್ ಹೋಟೆಲ್ ಗಳಲ್ಲಿ ತಿಂಡಿ, ಭೋಜನ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ 85959 31292, 90031 40710 ಸಂಪರ್ಕಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read