ಮಂಗಳೂರು: ಪಿಕಪ್ ವಾಹನ ಚಾಲಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕಂಬೋಡಿಯಾ ಇರಾಕೋಡಿ ಬಳಿ ಹತ್ಯೆ ಮಾಡಲಾಗಿದೆ. ಹನೀಫ್ ಕೊಲೆಯಾದ ಪಿಕಪ್ ವಾಹನ ಚಾಲಕ.
ಮರಳು ಅನ್ ಲೋಡ್ ಮಾಡುವಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹನೀಫ್ ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಹನೀಫ್ ಜೊತೆಗಿದ್ದ ಮತ್ತೋರ್ವನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.