ಬೆಂಗಳೂರು: ಪಿಜಿ ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ 3ನೇ ಸುತ್ತಿನ (ಮಾಪ್ ಅಪ್ ಸುತ್ತು) ಸೀಟು ಹಂಚಿಕೆ ಪ್ರಕ್ರಿಯೆಯು ಆರಂಭವಾಗಿದ್ದು ಅರ್ಹರು ಅಗಸ್ಟ್ 8ರೊಳಗೆ ಕಾಷನ್ ಡೆಪಾಸಿಟ್ ಕಟ್ಟಬೇಕು.
ಕಾಷನ್ ಡೆಪಾಸಿಟ್ ಕಟ್ಟಿದವರಿಗೆ ಆ.8ರಿಂದ 13ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಆ.13ರಂದು ಸಂಜೆ 4 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.14ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಆ.19ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು.
ವಿವರಗಳಿಗೆ ವೆಬ್ ಸೈಟ್ ನೋಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#MDS-25: ಪಿಜಿ ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ 3ನೇ ಸುತ್ತಿನ (ಮಾಪ್ ಅಪ್ ಸುತ್ತು) ಸೀಟು ಹಂಚಿಕೆ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಿದ್ದು ಅರ್ಹರು ಅಗಸ್ಟ್ 8ರೊಳಗೆ ಕಾಷನ್ ಡೆಪಾಸಿಟ್ ಕಟ್ಟಬೇಕು.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 7, 2025
ಕಾಷನ್ ಡೆಪಾಸಿಟ್ ಕಟ್ಟಿದವರಿಗೆ ಆ.8ರಿಂದ 13ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಆ.13ರಂದು ಸಂಜೆ 4 ಗಂಟೆಗೆ… pic.twitter.com/KNdqLTzC5m