ಬೆಂಗಳೂರು : ಬೆಂಗಳೂರಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಕು ಪ್ರಾಣಿಗಳನ್ನ ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಸಾಕು ಬೆಕ್ಕು, ನಾಯಿಗಳಿಗೆ ಹಿಂಸೆ ನೀಡಿ ಮರಕ್ಕೆ ಕಟ್ಟಿ ಕೊಂದು ವಿಕೃತಿ ಮೆರೆದಿರುವ ಘಟನೆ ಬಾಣಸವಾಡಿ ಪಂಚಮುಖಿ ದೇಗುಲದ ಬಳಿ ನಡೆದಿದೆ. ಕೀಚಕರ ವಿರುದ್ಧ ಪ್ರಾಣಿ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 4 ದಿನದ ಹಿಂದೆ ಹಲವು ಬೆಕ್ಕಿನ ಮರಿಗಳನ್ನು ತುಂಡಾ ತುಂಡಾಗಿ ಪೀಸ್ ಮಾಡಿ ಎಸೆದು ಹೋಗಿದ್ದರು. ಈಗ ಮತ್ತೆ ನಾಯಿ ಹಾಗೂ ಬೆಕ್ಕಿನ ಮರಿಗಳನ್ನ ಇಲ್ಲಿ ತಂದು ಬರ್ಬರವಾಗಿ ಕೊಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜಾಗದಲ್ಲಿ ಪ್ರಾಣಿಗಳ ಮಾರಣ ಹೋಮ ಹೆಚ್ಚಾಗಿ ನಡೆಯುತ್ತದೆ. ಸತ್ತ ಪ್ರಾಣಿಗಳ ದುರ್ವಾಸನೆ ಬರುತ್ತದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯ ಎಸಗುವ ಪಾಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
