ಬಾಂಗ್ಲಾದೇಶದ ಢಾಕಾದಲ್ಲಿ ಇಬ್ಬರು ಯುವಕರು ಚಲಿಸುವ ಟ್ರಕ್‌ನ ಹಿಂದೆ ಸ್ಕೇಟಿಂಗ್ ಸಾಹಸ ಪ್ರದರ್ಶಿಸುತ್ತಿರುವುದು ಕಂಡು ಬಂದಿದೆ. ಅವರ ಸ್ಕೇಟಿಂಗ್ ಸ್ಟಂಟ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಕ್ಲಿಪ್ ನಲ್ಲಿ ಸ್ಕೇಟಿಂಗ್ ಹಾಕಿಕೊಂಡಿರುವ ಯುವಕರು, ಟ್ರಕ್ ಅನ್ನು ಹಿಡಿದುಕೊಂಡು ಸ್ಟಂಟ್ ಮಾಡ್ತಿದ್ದಾರೆ
ಜನನಿಬಿಡ ರಸ್ತೆಯಲ್ಲಿ ಟ್ರಾಫಿಕ್ ಇರುವಾಗ್ಲೇ ಇವರು ಈ ಸಾಹಸ ಮಾಡ್ತಿದ್ದಾರೆ. ಒಬ್ಬ ಯುವಕ ಆಗಾಗ ಟ್ರಕ್ ನಿಂದ ಮುಂದೆ ಹೋಗಿ ತನ್ನ ಸ್ಟಂಟ್ ಪ್ರದರ್ಶನ ಮಾಡ್ತಿದ್ದಾನೆ. ಮತ್ತೆ ಬಂದು ಟ್ರಕ್ ಹಿಂಭಾಗವನ್ನು ಹಿಡಿದುಕೊಳ್ತಿದ್ದಾನೆ. ಢಾಕಾದ ಬಿಜೋಯ್ ಸರನಿ ಮೆಟ್ರೋ ನಿಲ್ದಾಣದ ಬಳಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡ ಪತ್ರಕರ್ತ ನಿಶಾಂತ್ ಶರ್ಮಾ, ಇವನು ಟ್ರಕ್ ಅಡಿಯಲ್ಲಿ ಬಿದ್ರೆ ಇವನ ಕುಟುಂಬ ಟ್ರಕ್ ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸುತ್ತದೆ, ಇವನ ಕುಟುಂಬದ ಸದಸ್ಯರಿಗೆ ಇವರ ದೇಹದ ಒಂದು ಭಾಗವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹವರ ನಿರ್ಲಕ್ಷ್ಯದಿಂದ ಅಮಾಯಕರು ಸಿಕ್ಕಿ ಬೀಳುತ್ತಾರೆ. ಕ್ರಮ ತೆಗೆದುಕೊಳ್ಳಬೇಕು ಎಂದು ಶೀರ್ಷಿಕೆ ಹಾಕಿದ್ದಾರೆ.
https://twitter.com/Nishantjournali/status/1822619664809156965?ref_src=twsrc%5Etfw%7Ctwcamp%5Etweetembed%7Ctwterm%5E1822619664809156965%7Ctwgr%5E150e59c0903b24ce57ec3dc09528bd4d56cb7f24%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fboys-perform-deadly-skating-stunt-behind-moving-truck-in-bangladesh-viral-video-sparks-outrage-9510887%2F