BREAKING NEWS: ಹೃದಯಾಘಾತದಿಂದ ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ವಿಧಿವಶ

ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸಹ ಸಂಸ್ಥಾಪಕ ಆಶಿಶ್ ಷಾ ಟ್ವೀಟ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಕಳೆದ ರಾತ್ರಿ ಲೇಹ್ ನಲ್ಲಿ ಅಂಬರೀಶ್ ಮೂರ್ತಿಯವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ನನ್ನ ಸ್ನೇಹಿತ, ಹಿತೈಷಿ, ಸಹೋದರ ಎಲ್ಲವೂ ಆಗಿದ್ದ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿರುವ ಆಶಿಶ್ ಷಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read