ಸಕ್ಕರೆ ಕಾಯಿಲೆ ಇರುವವರು ಚಪಾತಿ ತಿನ್ನುವ ಮುನ್ನ ವಹಿಸಿ ಎಚ್ಚರ…..!

ವೈವಿದ್ಯಮಯ ಆಹಾರ ಪದ್ಧತಿಗೆ ಭಾರತ ಹೆಸರುವಾಸಿ. ಉತ್ತರ ಭಾರತ, ದಕ್ಷಿಣ ಭಾರತ ಹೀಗೆ ಬೇರೆ ಬೇರೆ ಕಡೆಯ ಥಾಲಿಗಳಂತೂ ಬಾಯಲ್ಲಿ ನೀರೂರಿಸುತ್ತವೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ರೊಟ್ಟಿಯನ್ನು ದೈನಂದಿನ ಆಹಾರದಲ್ಲಿ ಸೇರಿಸಲಾಗುತ್ತದೆ. ಗೋಧಿ ಹಿಟ್ಟಿನ ಚಪಾತಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ.

ಆದ್ರೆ ಸಕ್ಕರೆ ಕಾಯಿಲೆ ಇರುವವರು ಚಪಾತಿಗಾಗಿ ಬಳಸುವ ಗೋಧಿ ಹಿಟ್ಟಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ಮಧುಮೇಹ ಇರುವವರು ಯಾವ್ಯಾವ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ಸೇವನೆ ಮಾಡಬಹುದು ಅನ್ನೋದನ್ನು ನೋಡೋಣ.

ಓಟ್ಸ್ ರೊಟ್ಟಿ: ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಹೆಚ್ಚಾಗಿರುತ್ತದೆ. ಹೆಚ್ಚು ಕಾರ್ಬೋಹೈಡ್ರೇಟ್‌  ಸೇವನೆ ಮಧುಮೇಹಿಗಳಿಗೆ ಸೂಕ್ತವಲ್ಲ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಗೋಧಿ ಹಿಟ್ಟಿನ ಬದಲಿಗೆ ಓಟ್ಸ್ ರೊಟ್ಟಿಗಳನ್ನು ತಿನ್ನಬೇಕು. ಓಟ್ಸ್‌ನಲ್ಲಿ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ. ಪೋಷಕಾಂಶಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಓಟ್ಸ್ ಜೀರ್ಣಕ್ರಿಯೆಯ ನಂತರ ಗ್ಲೂಕೋಸ್ ಅನ್ನು ಆರಾಮವಾಗಿ ಬಿಡುಗಡೆ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ. ಓಟ್ಸ್ ಗೋಧಿಗಿಂತ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಕೆಲವರಿಗೆ ಆರಂಭದಲ್ಲಿ ಓಟ್ಸ್ ತಿನ್ನಲು ಇಷ್ಟವಾಗದೇ ಇರಬಹುದು. ಆದರೆ ಓಟ್ಸ್ ಸೇವನೆಗೆ ಹಲವು ವಿಧಾನಗಳಿವೆ. ರೊಟ್ಟಿ ಇಷ್ಟವಾಗದೇ ಇದ್ದಲ್ಲಿ ಮಸಾಲೆಯುಕ್ತ ಕಿಚಡಿಯನ್ನು ಸಹ ಮಾಡಬಹುದು.

ಓಟ್ಸ್ ಅನ್ನು ಹಾಲಿಗೆ ಸೇರಿಸಿ ಕೂಡ ತಿನ್ನಬಹುದು. ಓಟ್ಸ್ ರೊಟ್ಟಿಯನ್ನು ರುಚಿಕರವಾಗಿಸಲು, ರುಬ್ಬಿದ ಓಟ್ಸ್‌ಗೆ ಉಪ್ಪು, ಜೀರಿಗೆ ಮತ್ತು ಈರುಳ್ಳಿ ಸೇರಿಸಿ ರೊಟ್ಟಿ ಮಾಡಬಹುದು. ಈ ರೀತಿಯಾಗಿ ಗೋಧಿಗೆ ಪರ್ಯಾಯ ಆಹಾರವನ್ನು ಸಕ್ಕರೆ ಕಾಯಿಲೆ ಇರುವವರು ಬಳಕೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read