ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು ಮಂತ್ರಮುಗ್ಧಗೊಳಿಸುವ ವಿಡಿಯೋ ವೈರಲ್ ಆಗಿದೆ.
1984ರ ’ಉತ್ಸವ್’ ಚಿತ್ರದ ’ಸಾಂಜ಼್ ದಾಲೇ ಗಗನ್ ತಾಲೇ’ ಹಾಡಿಗೆ ಇವರು ದನಿಗೂಡುತ್ತಿರುವ ವಿಡಿಯೋವನ್ನು ದೀಪಿಕಾ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಕಚೇರಿಯ ಒಳಗಿಂದ ಇವರು ಹೀಗೆ ಹಾಡುತ್ತಿರುವುದನ್ನು ದಾರಿಹೋಕರು ಭಾರೀ ಆಸಕ್ತಿಯಿಂದ ಆಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ಯಾಕೆ ಆಗಲ್ಲ! ನಾನು ಕೆಲಸ ಮಾಡಿದ ಯಾವುದೇ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಗೆ ತಮ್ಮ ಪ್ರತಿಭೆಯನ್ನು ತೋರಲು ಅವಕಾಶ ನೀಡಿಲ್ಲ. ನಮ್ಮಲ್ಲಿ ಪ್ರತಿಭಾ ಪ್ರದರ್ಶನಗಳು ಇದ್ದರೂ ಸಹ ಭದ್ರತಾ ಸಿಬ್ಬಂದಿ ಹಾಗೂ ಹೌಸ್‌ಕೀಪಿಂಗ್ ಸಿಬ್ಬಂದಿಗೆ ಅವಕಾಶಗಳನ್ನು ಕೊಟ್ಟಿಲ್ಲ. ಇದಕ್ಕೆ ಸಹಿ ಮಾಡಿದ ಐಎಂಸಿಯ ವ್ಯಕ್ತಿಗೆ ನನ್ನ ಶ್ಲಾಘನೆಗಳು,” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ ದೀಪಿಕಾ.
https://twitter.com/Konjunktiv_II/status/1653114895796166686?ref_src=twsrc%5Etfw%7Ctwcamp%5Etweetembed%7Ctwterm%5E1653114895796166686%7Ctwgr%5Ecce5d5e20f4161fbb00d19020036fa8a939508f4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpeople-stop-by-to-listen-to-this-mumbai-security-guard-singing-saanjh-dhale-gagan-tale-watch-2367499-2023-05-02