ಈ ರಾಶಿಯವರಿಗಿದೆ ಇಂದು ಉತ್ತಮ ʼಲಾಭʼ

ಮೇಷ : ಉದ್ಯೋಗಕ್ಕೆ ಅರಸುತ್ತಿರುವವರಿಗೆ ಸದಾವಕಾಶ ಸಿಗಲಿದೆ. ತೀಕ್ಷ್ಣವಾದ ಮಾತುಗಳಿಂದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಲಿದ್ದೀರಿ. ನಿಮ್ಮ ಮಾತು ಬೇರೆಯವರ ಮನಸ್ಸಿಗೆ ನೋವಾಗದಂತೆ ವರ್ತಿಸಿ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯುತ್ತೀರಿ.

ವೃಷಭ: ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಸಂತುಷ್ಟರಾಗಲಿದ್ದೀರಿ. ದಾಂಪತ್ಯ ಜೀವನದಲ್ಲಿನ ವಿರಸಗಳು ದೂರಾಗಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶಿಕ್ಷಕರಿಗೆ ಇದು ಒತ್ತಡಮಯ ದಿನವಾಗಿದೆ.

ಮಿಥುನ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಇನ್ನಷ್ಟು ಪರಿಶ್ರಮ ವಹಿಸಲಿದ್ದಾರೆ. ಸಂಬಂಧಿಕರಿಂದ ಟೀಕೆ ಎದುರಿಸಲಿದ್ದೀರಿ. ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸಾಲಗಾರರು ನಿಮ್ಮನ್ನು ಕಾಡಬಹುದು.

ಕಟಕ : ಮೊದಲ ಭೇಟಿಯಲ್ಲೇ ಅವರ ಬಗ್ಗೆ ಯಾವುದೇ ಅಭಿಪ್ರಾಯ ಹೊಂದಬೇಡಿ. ಅವರ ಗುಣ ಬೇರೆಯದ್ದೇ ಇರಬಹುದು. ಕೋರ್ಟ್ ಕಚೇರಿ ವಿಚಾರದಲ್ಲಿ ನಿಮಗೆ ಮುನ್ನಡೆ ಕಾದಿದೆ. ಜವಳಿ ಉದ್ಯಮಿಗಳಿಗೆ ಉತ್ತಮ ಲಾಭವಿದೆ.

ಸಿಂಹ : ನಿಮ್ಮ ಬುದ್ಧಿ ನಿಮ್ಮ ಸ್ಥಿಮಿತದಲ್ಲಿ ಇರಲಿ. ಇಲ್ಲವಾದಲ್ಲಿ ಭಾರೀ ನಷ್ಟ ಅನುಭವಿಸಲಿದ್ದೀರಿ. ಮನೆಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿ. ಕುಲದೇವರ ದರ್ಶನಕ್ಕೆ ಕುಟುಂಬಸ್ಥರು ತೆರಳಲಿದ್ದೀರಿ.

ಕನ್ಯಾ: ರಾಜಕೀಯ ರಂಗದಲ್ಲಿ ಇರುವವರು ಮಾಡದ ತಪ್ಪಿಗೆ ಅಪವಾದವನ್ನು ಎದುರಿಸಬೇಕಾಗಿ ಬರಬಹುದು. ಈ ದಿನ ನಿಮ್ಮ ದೇಹಕ್ಕೆ ಗಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬೇಡಿ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಿದೆ.

ತುಲಾ : ಸಹೋದರರು ಹಿಂದುರಿಗಿಸಬೇಕಿದ್ದ ಹಣವನ್ನು ನೀಡಲಿದ್ದಾರೆ. ಇದರಿಂದ ಆರ್ಥಿಕವಾಗಿ ನೀವು ಇನ್ನಷ್ಟು ಸದೃಢವಾಗಲಿದ್ದೀರಿ. ಸಹೋದರರ ಜೊತೆ ಕೂತು ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕುವ ಕ್ಷಣಕ್ಕೆ ಸಾಕ್ಷಿಯಾಗಲಿದ್ದೀರಿ.

ವೃಶ್ಚಿಕ : ತುರ್ತು ಸೇವಾ ಸಿಬ್ಬಂದಿಗೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಸೋಮಾರಿತನದಿಂದ ಉದ್ಯಮಿಗಳು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ.  ಪತಿ – ಪತ್ನಿಯ ನಡುವೆ ಅನಗತ್ಯ ವಾದ ಆಗದಂತೆ ಎಚ್ಚರ ವಹಿಸಿ.

ಧನು : ಅತಿಯಾದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಶನೈಶ್ಚರನ ಧ್ಯಾನ ಮಾಡಿ. ಅತಿಯಾದ ಕೋಪದಿಂದ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲಿದ್ದೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅವಸರ ಬೇಡ.

ಮಕರ : ಸಹೋದ್ಯೋಗಿಗಳ ಅತಿಯಾದ ಪ್ರೀತಿಯನ್ನು ನಂಬಬೇಡಿ. ನಂಬಿಸಿ ಕುತ್ತಿಗೆ ಕೊಯ್ಯುವ ಪ್ರಯತ್ನ ಕೂಡ ಇದಾಗಿರಬಹುದು. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಪದೇ ಪದೇ ಕಾಡಲಿದೆ. ಇದರಿಂದ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಲಿದೆ. ಸಂತಾನ ಭಾಗ್ಯವಿದೆ.

ಕುಂಭ : ಕರಕುಶಲ ಕಾರ್ಮಿಕರಿಗೆ ಇದು ಶುಭ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳ ಟೀಕೆ ನಿಮ್ಮನ್ನು ಇನ್ನಷ್ಟು ಕುಗ್ಗಿಸಲಿದೆ. ಆದರೆ ಕೊಂಕು ಮಾತುಗಳಿಂದ ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಕಲಾವಿದರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಮೀನ : ನವವಿವಾಹಿತರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ಕಚೇರಿ ಕೆಲಸಕ್ಕೆ ಹೋಗುವ ಮುನ್ನ ಎಲ್ಲಾ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ತಾಳ್ಮೆ ಇಲ್ಲದೇ ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆಯಲು ಸಾಧ್ಯವೇ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read