ಬೆಂಗಳೂರು: ಪೀಣ್ಯ ಫ್ಲೈ ಓವರ್ ಮೇಲೆ ಲಾರಿಯೊಂದು ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.
ಬಿಸಿಲ ಧಗೆಯಲ್ಲಿ ಫೈಓವರ್ ಮೇಲೆ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ತಕ್ಷಣ ಲಾರಿ ನಿಲ್ಲಿಸಿ ಕೆಳಗಿಳಿದಿದ್ದಾರೆ. ಅಷ್ಟರಲ್ಲಿ ಲಾರಿ ಬೆಂಂಕಿ ಕೆನ್ನಾಲಿಗೆಗೆ ಹೊತ್ತಿ ಉರಿಯಲಾರಂಭಿಸಿದೆ.
ಬೆಂಕಿ ಅವಘಡದಿಂದಾಗಿ ಫ್ಲೈ ಓವರ್ ಮೇಲೆ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಾರಿಯ ಬಹುತೇಕ ಸುಟ್ಟು ಕರಕಲಾಗಿದೆ.