ಬೆಂಗಳೂರಿನಲ್ಲಿ ಪ್ರತಿದಿನ ಕೆಲಸಕ್ಕೆ ಹೊರಡುವವರಿಗೆ ಟ್ರಾಫಿಕ್ ಕಿರಿಕಿರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಕೆಲವೊಮ್ಮೆ ಭಾರೀ ಮಳೆ, ರಸ್ತೆಯಲ್ಲಿ ಮರಬಿದ್ದ ಘಟನೆಗಳಿಂದ ಬದಲಿ ಮಾರ್ಗದಲ್ಲಿ ಹೋಗುವವರಿಗೆ ಗಮ್ಯಸ್ಥಾನ ತಲುಪುವುದು ದೊಡ್ಡ ಸಾಹಸವೇ ಸರಿ. ಹೀಗೆ ಭಾರೀ ಟ್ರಾಫಿಕ್ ನಲ್ಲಿ ಸಿಲುಕಿದ ಮಹಿಳೆಯೊಬ್ಬರು ರಾಪಿಡೋ ಬೈಕ್ ಮೇಲೆ ಕುಳಿತೇ ಲ್ಯಾಪ್ ಟ್ಯಾಪ್ ತೆಗೆದು ಕಚೇರಿ ಕೆಲಸ ಶುರು ಮಾಡಿದರು. ಟ್ವಿಟರ್‌ನಲ್ಲಿ ಹಂಚಿಕೊಂಡ ಈ ಫೋಟೋ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿದಿದೆ. ‘ಪೀಕ್ ಬೆಂಗಳೂರು ಕ್ಷಣ’ ಎಂದು ಟ್ವಿಟರ್ ನಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.
ಫೋಟೋವನ್ನು ಕೋರಮಂಗಲ-ಅಗರ-ಹೊರವರ್ತುಲ ರಸ್ತೆಯ ಉದ್ದಕ್ಕೂ ತೆಗೆಯಲಾಗಿದೆ. ಈ ಮಾರ್ಗವು ಭಾರೀ ಟ್ರಾಫಿಕ್ ನಿಂದ ಸದಾ ಸುದ್ದಿಯಲ್ಲಿರುತ್ತದೆ. ಹೊರ ವರ್ತುಲ ರಸ್ತೆಯ ಇಬ್ಬಲೂರು ಬಳಿಯ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ ಮರವೊಂದು ಉರುಳಿ ಬಿದ್ದಿದ್ದರಿಂದ ಮಂಗಳವಾರ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ವಾಹನ ಸವಾರರು ಟ್ರಾಫಿಕ್ ನಿಂದ ಭಾರೀ ಕಿರಿಕಿರಿ ಅನುಭವಿಸಿದ್ದರು.
https://twitter.com/nihar_lohiya/status/1658344198360399873?ref_src=twsrc%5Etfw%7Ctwcamp%5Etweetembed%7Ctwterm%5E1658344198360399873%7Ctwgr%5Ec4b58d7bfcf2bf588ef5adbfa6798952c2f42872%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fpeak-bengaluru-moment-pic-of-woman-working-on-laptop-while-being-stuck-in-traffic-is-viral-4043501
https://twitter.com/DCPSouthTrBCP/status/1658340695579701249?ref_src=twsrc%5Etfw%7Ctwcamp%5Etweetembed%7Ctwterm%5E1658340697664262145%7Ctwgr%5Ec4b58d7bfcf2bf588ef5adbfa6798952c2f42872%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fpeak-bengaluru-moment-pic-of-woman-working-on-laptop-while-being-stuck-in-traffic-is-viral-4043501