ಕೊಪ್ಪಳ : ಕೊಪ್ಪಳ ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾ.ಪಂ. ಪಿಡಿಒ ರವೀಂದ್ರ ಕುಲಕರ್ಣಿ ಹಾಗೂ ಬಿಜಕಲ್ ಗ್ರಾ.ಪಂ. ಪಿಡಿಒ ನಾಗೇಶ್ ರನ್ನು ಅಮಾನತು ಮಾಡಿ ಪಂಚಾಯತ್ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಆದೇಶ ಹೊರಡಿಸಿದ್ದಾರೆ.
ಜಲ ಜೀವನ್ ಕಾಮಗಾರಿ ವೇಳೆ ಲೋಪಗಳಾಗಿದ್ದು, ಇದರಿಂದ ಗ್ರಾಮದಲ್ಲಿ ನೀರು ಕಲುಷಿತವಾಗಿದೆ. ಈ ಹಿನ್ನೆಲೆ ಮೂರು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದರು. ಕೊಪ್ಪಳ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟು, ಹಲವರು ಆಸ್ಪತ್ರೆ ಸೇರಿದ್ದರು. ಇದಲ್ಲದೇ ಬೀದರ್ ನಲ್ಲಿ ಕೂಡ ಕಲುಷಿತ ನೀರು ಸೇವಿಸಿ 18 ಮಂದಿ ಅಸ್ವಸ್ಥಗೊಂಡಿದ್ದಾರೆ.
.