ಗ್ರಾಪಂ ಅಧ್ಯಕ್ಷರಿಗೆ ಖರ್ಚು ವೆಚ್ಚದ ಮಾಹಿತಿ ನೀಡದೇ ಉದ್ಧಟತನ ತೋರಿದ ಪಿಡಿಒ ಅಮಾನತು

ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಈಶ್ವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 15 ಹಣಕಾಸಿನ ಖರ್ಚು ವೆಚ್ಚದ ಮಾಹಿತಿಯನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನೀಡದೆ ಉದ್ಧಟನವನ್ನು ತೋರುವುದರ ಜೊತೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ನೇಮಿಸಲಾದ ತನಿಖಾ ತಂಡ ಆಡಿಟ್ ನಡೆಸಲು ಸೂಕ್ತ ದಾಖಲೆಗಳನ್ನು ನೀಡದೆ ಬೇಜವಬ್ದಾರಿಯನ್ನು ಪಿಡಿಒ ಸಿ.ಈಶ್ವರ ಪ್ರದರ್ಶಿಸಿದ್ದಾರೆ.

ಹಣಕಾಸಿನ ವ್ಯವಹಾರದ ಲೆಕ್ಕ ಒದಗಿಸದೆ ಕರ್ತವ್ಯ ಲೋಪ ತೋರಿದ್ದಾರೆ. ಸರ್ಕಾರಿ ನೌಕರರಾಗಿ ಕರ್ನಾಟಕ ನಾಗರೀಕ ಸೇವಾ(ನಡವಳಿ) ನಿಯಮಾವಳಿಗಳು-1966 ನಿಯಮ-3(I)(II)&(III) ಉಲ್ಲಂಘಿಸಿದ ಕಾರಣ ಪಿಡಿಒ ಸಿ.ಈಶ್ವರ್ ಅವರನ್ನು ಅಮಾನತು ಮಾಡಿರುವುದಾಗಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read