ಜಿಯೋಫೈನಾನ್ಸ್ ಅಪ್ಲಿಕೇಷನ್ ಮೂಲಕ ಪ್ಯಾರಿಸ್ ಪ್ರವಾಸಿ ತಾಣಗಳಲ್ಲಿಯೂ ಪಾವತಿಗೆ ಅವಕಾಶ

ಜಾಗತಿಕ ಮಟ್ಟದಲ್ಲಿಯೇ ಈಗ ಪ್ಯಾರಿಸ್ ಕ್ರೀಡಾ ಉತ್ಸಾಹಿಗಳನ್ನು ಸೆಳೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ನಿಂದ ಮಹತ್ತರವಾದ ಘೋಷಣೆ ಮಾಡಿದ್ದು, ಫ್ರೆಂಚ್ ರಾಜಧಾನಿ ಪ್ಯಾರಿಸ್ ನಲ್ಲಿ ಜಿಯೋಫೈನಾನ್ಸ್ ಅಪ್ಲಿಕೇಷನ್‌ ಅನ್ನು ಅಲ್ಲಿ ಪರಿಚಯಿಸಲಾಗಿದೆ. ಇದರೊಂದಿಗೆ ರಿಲಯನ್ಸ್ ಜಿಯೋಫೈನಾನ್ಸ್ ಅಪ್ಲಿಕೇಷನ್ ಪ್ಯಾರಿಸ್ ನಲ್ಲಿ ಪ್ರವೇಶ ಪಡೆದಿದೆ.

ಭಾರತೀಯ ಪ್ರಯಾಣಿಕರಿಗೆ ಡಿಜಿಟಲ್ ವಹಿವಾಟು ನಡೆಸಲು ಅನುಕೂಲವಾಗುವಂತೆ, ಅಧಿಕೃತ ವೆಬ್‌ಸೈಟ್ ಲಾ ಟೂರ್ ಐಫೆಲ್ ಮೂಲಕ ಐಫೆಲ್ ಟವರ್‌ಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಖರೀದಿಸಲು ಜಿಯೋಫೈನಾನ್ಸ್ ಅಂತಾರಾಷ್ಟ್ರೀಯ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ; ಹಾಗೆಯೇ ಪ್ಯಾರಿಸ್ ಡಿಪಾರ್ಟ್‌ಮೆಂಟ್ ಸ್ಟೋರ್, ಗ್ಯಾಲರೀಸ್ ಲಫಯೆಟ್ಟೆ ಪ್ಯಾರಿಸ್ ಹೌಸ್‌ಮನ್‌ನಲ್ಲಿ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಇದರಿಂದ ಅನುಕೂಲ ಆಗುತ್ತದೆ.

ಭಾರತೀಯ ಒಲಿಂಪಿಕ್ ಒಕ್ಕೂಟದ ಸಹಭಾಗಿತ್ವದಲ್ಲಿ ರಿಲಯನ್ಸ್ ಫೌಂಡೇಷನ್ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ‘ಇಂಡಿಯಾ ಹೌಸ್’ ಒಳಗೆ ನಿಗದಿಪಡಿಸಿದ ಅನುಭವ ಕೇಂದ್ರದ (ಎಕ್ಸ್ ಪೀರಿಯೆನ್ಸ್ ಸೆಂಟರ್) ಮೂಲಕ ಜಿಯೋಫೈನಾನ್ಸ್ ಅಪ್ಲಿಕೇಷನ್ ಅನುಭವ ಸಹ ಪಡೆಯಬಹುದು. ಇಂಡಿಯಾ ಹೌಸ್ ಎಂಬುದು ಭಾರತದ ಶ್ರೀಮಂತ ಪರಂಪರೆ ಮತ್ತು ಐತಿಹ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸುತ್ತಿದೆ. ಮತ್ತು ಈ ಸಮಯದಲ್ಲಿ ಪ್ಯಾರಿಸ್‌ನಲ್ಲಿ ಇರುವ ಭಾರತೀಯ ಕ್ರೀಡಾಪಟುಗಳು ಮತ್ತು ಸಂದರ್ಶಕರಿಗೆ ಇಂಡಿಯಾ ಹೌಸ್ ತಮ್ಮ ಮನೆಯಿಂದ ದೂರವಿರುವ ಮತ್ತೊಂದು ಮನೆಯಂತಾಗಿದೆ.

ಒಲಿಂಪಿಕ್ ಗೇಮ್ಸ್ ಪ್ಯಾರಿಸ್ 2024ರ ಅಧಿಕೃತ ಪಾವತಿ ಪಾಲುದಾರ ವೀಸಾ ಆಗಿದ್ದು, ಮತ್ತು ವೀಸಾದೊಂದಿಗೆ ಸಹಭಾಗಿತ್ವ ಇರುವ ಜಿಯೋ ಫೈನಾನ್ಸ್ ಈಗ ಇಂಡಿಯಾ ಹೌಸ್‌ನಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.

ಸಲೀಸಾದ ನ್ಯಾವಿಗೇಷನ್‌ಗಾಗಿ ವಿನ್ಯಾಸ ಮಾಡಲಾದ ಜಿಯೋಫೈನಾನ್ಸ್ ಇದೀಗ ಭಾರತೀಯರಿಗೆ ಅವರ ಹಣಕಾಸಿನ ಪ್ರಯಾಣದ ಪ್ರತಿ ಹಂತದಲ್ಲೂ ಅತ್ಯುತ್ತಮವಾದ ಡಿಜಿಟಲ್ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಅಪ್ಲಿಕೇಷನ್ ಅವರಿಗೆ ಪರಿಚಯದ ಎಲ್ಲ ಹಂತಗಳನ್ನೂ ಹಣಕಾಸಿನ ತಂತ್ರಜ್ಞಾನದೊಂದಿಗೆ ಬಳಕೆದಾರರಿಗೆ ಪೂರೈಸುತ್ತದೆ, ಶ್ರಮವಿಲ್ಲದ ಹಣ ನಿರ್ವಹಣೆಯನ್ನು ಅವರ ಬೆರಳ ತುದಿಯಲ್ಲಿ ಖಾತ್ರಿಗೊಳಿಸುತ್ತದೆ.

ಜಿಯೋಫೈನಾನ್ಸ್ ತನ್ನ ಬಳಕೆದಾರರಿಗೆ ಶೀಘ್ರ ಯುಪಿಐ ಪಾವತಿಗಳು, ಸಂಪೂರ್ಣ ಡಿಜಿಟಲ್ ಬ್ಯಾಂಕ್ ಖಾತೆ, ವ್ಯಾಲೆಟ್ ಸೇವೆಗಳು, ಬಿಲ್ ಪಾವತಿ ಮತ್ತು ರೀಚಾರ್ಜ್‌ಗಳು, ಬಹುಮಾನಗಳು, ವಿಮೆ ಬ್ರೋಕಿಂಗ್ ಮತ್ತು ಬ್ಯಾಂಕ್ ಖಾತೆಗಳಾದ್ಯಂತ ಒಳಕೆದಾರರಿಗೆ ಹೋಲ್ಡಿಂಗ್‌ನ ಏಕ-ಗವಾಕ್ಷಿ (ಸಿಂಗಲ್ ವಿಂಡೋ) ವೀಕ್ಷಣೆಯಂತಹ ಆಧುನಿಕ, ತಡೆರಹಿತ ವೈಶಿಷ್ಟ್ಯಗಳನ್ನು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read