ಮಗುವಿನ ‘ಡೈಪರ್’ ಬದಲಿಸುವಾಗ ಈ ಬಗ್ಗೆ ನೀಡಿ ಗಮನ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ ಬದಲಾವಣೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಇದು ಸೋಂಕಿಗೆ ಕಾರಣವಾಗುತ್ತದೆ. ಸರಿಯಾದ ಕ್ರಮದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಡೈಪರ್ ಬದಲಾವಣೆ ಮಾಡಿದ್ರೆ ಶಿಶುಗಳಿಗೆ ಹರಡುವ ಸೋಂಕನ್ನು ತಡೆಯಬಹುದು.

ಮಗುವಿನ ತೂಕಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಡೈಪರ್ ಲಭ್ಯವಿದೆ. ಯಾವುದು ಉತ್ತಮ ಕಂಪನಿಯ ಡೈಪರ್ ಎಂಬುದನ್ನು ಪರಿಶೀಲಿಸಿ ಖರೀದಿ ಮಾಡಿ.

ಒಂದು ಡೈಪರ್ ಒದ್ದೆಯಾದ ನಂತ್ರ ಡೈಪರ್ ಬದಲಾಯಿಸಲು ಅಗತ್ಯವಿರುವ ಎಲ್ಲ ವಸ್ತುಗಳನ್ನು ತೆಗೆದಿಟ್ಟುಕೊಳ್ಳಿ.

ಎಲ್ಲ ವಸ್ತುಗಳನ್ನು ಒಂದು ಕಡೆ ಎತ್ತಿಟ್ಟುಕೊಂಡ ನಂತ್ರ ಮಗುವನ್ನು ಸ್ವಚ್ಛವಾದ ಸ್ಥಳದಲ್ಲಿ ಮಲಗಿಸಿ.

ಎರಡೂ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿ ಡೈಪರ್ ತೆಗೆಯಿರಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಶಿಶುಗಳಿಗೆ ಆಲ್ಕೋಹಾಲ್ ವೈಪ್ಸ್ ನಿಂದ ಒರೆಸಬೇಡಿ. ಮನೆಯಲ್ಲಿರುವ ಹತ್ತಿ ಬಟ್ಟೆ ಅಥವಾ ಬೇಬಿ ವೈಪ್ಸ್ ಬಳಸಿ.

ನೀರು ಆರಿದ ನಂತ್ರ ಮತ್ತೊಂದು ಡೈಪರ್ ಹಾಕಿ. ಇಲ್ಲವಾದ್ರೆ ಸೋಂಕು ತಗಲುವ ಸಾಧ್ಯತೆಯಿರುತ್ತದೆ.

ತುಂಬಾ ಸಮಯ ಒಂದೇ ಡೈಪರನ್ನು ಮಗುವಿಗೆ ಹಾಕಬೇಡಿ. ಇದು ಸೋಂಕು ಹರಡಲು ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read