ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತನ್ನ ಮೂರನೇ ಪತ್ನಿಯ ಜೊತೆಯೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪವನ್ ಕಲ್ಯಾಣ್ ಅನ್ನಾ ಲೆಜ್ನೆವಾ ಜೊತೆ 10 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನ್ನಾ ಈಗಾಗಲೇ ಪವನ್ರಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದ್ದು ಈಗಾಗಲೇ ಅವರು ತಮ್ಮ ಮಕ್ಕಳೊಂದಿಗೆ ರಷ್ಯಾಗೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ವದಂತಿಗಳಿಗೆ ಪವನ್ ಆಗಲಿ ಅನ್ನಾ ಆಗಲಿ ಈವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ಪವನ್ ಕಲ್ಯಾಣ್ ಹಾಗೂ ಅನ್ನಾ ಲೆಜ್ನೋವಾ ಕಾನೂನಾತ್ಮಕವಾಗಿ ಬೇರ್ಪಟ್ಟಿಲ್ಲವಾದರೂ ಸಹ ಅವರು ಒಟ್ಟಾಗಿ ದಾಂಪತ್ಯ ಜೀವನ ನಡೆಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಪವನ್ ಕಲ್ಯಾಣ್ ಕುಟುಂಬದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಅನ್ನಾ ಗೈರಾಗಿದ್ದು ಈ ವದಂತಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಆಗಾಗ ಪವನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ತಿದ್ದ ಅನ್ನಾ, ಕಳೆದ ತಿಂಗಳು ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಪವನ್ರ ವಾರಾಹಿ ಯಾತ್ರೆಯ ಆರಂಭಕ್ಕೂ ಮುನ್ನ ನಡೆದ ಯಾಗದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಪವನ್ ತಮ್ಮ ಮಕ್ಕಳೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಯಾವುದರ ಬಗ್ಗೆಯೂ ಪವನ್ ಕಲ್ಯಾಣ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯಾರಿದು ಅನ್ನಾ ಲೆಜ್ನೋವಾ ?
ಪವನ್ ಕಲ್ಯಾಣ್ ಹಾಗೂ ಅನ್ನಾ 2011ರಲ್ಲಿ ತೀನ್ ಮಾರ್ ಶೂಟಿಂಗ್ ಸಮಯದಲ್ಲಿ ಒಬ್ಬರೊನ್ನಬ್ಬರು ಭೇಟಿಯಾಗಿದ್ದರು. ಈ ಸಮಯದಲ್ಲಿ ಅನ್ನಾ ರಷ್ಯಾದ ರೂಪದರ್ಶಿ ಹಾಗೂ ನಟಿಯಾಗಿದ್ದರು. ಇದಾದ ಬಳಿಕ ಇಬ್ಬರು ಕೆಲ ಕಾಲ ಡೇಟಿಂಗ್ ನಡೆಸಿದ್ದರು. 2013ರ ಸೆಪ್ಟೆಂಬರ್ 30ರಂದು ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನ್ನಾಗೆ ತಮ್ಮ ಮೊದಲ ಮದುವೆಯಿಂದ ಪೋಲೆನಾ ಅಂಜನಾ ಪವನ್ನೋವಾ ಎಂಬ ಪುತ್ರಿ ಇದ್ದಳು. ಪವನ್ ಹಾಗೂ ಅನ್ನಾ 2017ರಲ್ಲಿ ಮಾರ್ಕ್ ಶಂಕರ್ ಪವನೋವಿಚ್ಗೆ ಜನ್ಮ ನೀಡಿದ್ದರು.