ಮಹಿಳಾ ಟೆಕ್ಕಿ ಜೊತೆ ಅಸಭ್ಯ ವರ್ತನೆ: ಪೊಲೀಸ್ ಕಾನ್ ಸ್ಟೆಬಲ್ ಅಮಾನತು

ಬೆಂಗಳೂರು: ಪಾಸ್ಪೋರ್ಟ್ ಪರಿಶೀಲನೆ ನೆಪದಲ್ಲಿ ಮಹಿಳಾ ಟೆಕ್ಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಅಮಾನತು ಮಾಡಲಾಗಿದೆ.

ಬ್ಯಾಟರಾಯನಪುರ ಠಾಣೆಯ ಕಿರಣ್ ಅಮಾನತುಗೊಂಡ ಪೊಲೀಸ್ ಕಾನ್ ಸ್ಟೆಬಲ್. ಮೈಸೂರು ರಸ್ತೆ ಬಾಪೂಜಿನಗರದಲ್ಲಿ ನೆಲೆಸಿರುವ ಮಹಿಳಾ ಟೆಕ್ಕಿ ಇತ್ತೀಚೆಗೆ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಪಾಸ್ಪೋರ್ಟ್ ಕಚೇರಿಯಿಂದ ಅರ್ಜಿ ಸ್ವೀಕರಿಸಿದ್ದ ಕಿರಣ್ ವೆರಿಫಿಕೇಷನ್ ಗೆಂದು ಎರಡು ಮೂರು ಬಾರಿ ಯುವತಿ ಮನೆಗೆ ಹೋಗಿದ್ದ.

ಇತ್ತೀಚೆಗೆ ಏಕಾಏಕಿ ಮನೆ ಒಳಗೆ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದು, ನಿನ್ನ ಅಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ಪೋರ್ಟ್ ರದ್ದು ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು ಎಂದು ತಾಕೀತು ಮಾಡಿದ್ದಾನೆ. ಒಪ್ಪದಿದ್ದಾಗ ತಾನೇ ಬಾಗಿಲು ಮುಚ್ಚಿ ಯಾರಿಗೂ ಹೇಳಬೇಡ ಒಂದೇ ಒಂದು ಸಲ ತಬ್ಬಿಕೊಳ್ಳುತ್ತೇನೆ ಎಂದಿದ್ದಾನೆ. ಪಕ್ಷದ ಕೋಣೆಯಲ್ಲಿ ಯುವತಿ ಸಹೋದರ ಇರುವುದನ್ನು ನೋಡಿ ಪರಾರಿಯಾಗಿದ್ದು, ಪಾಸ್ ಪೋರ್ಟ್ ವೆರಿಫಿಕೇಷನ್ ಮಾಡದೇ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾನೆ.

ಈ ಬಗ್ಗೆ ನೊಂದ ಯುವತಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರಿಗೆ ದೂರು ನೀಡಿದ್ದು, ಮೇಲ್ನೋಟಕ್ಕೆ ಆರೋಪ ಸತ್ಯವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಕಾನ್ ಸ್ಟೆಬಲ್ ಕಿರಣ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read