ಹತ್ತಲು ಸಿಗದ ಜಾಗ: ರಣಾಂಗಣವಾದ ರೈಲು ನಿಲ್ದಾಣ

ಥಾಣೆ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿರುವ ವೀಡಿಯೊ ಒಂದರಲ್ಲಿ ಪ್ರಯಾಣಿಕರು ಗಲಾಟೆಯಲ್ಲಿ ತೊಡಗಿರುವುದನ್ನು ನೋಡಬಹುದು. ಮಾರ್ಚ್ 3 ರಂದು ದಿವಾ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕರ್ಜಾತ್‌ಗೆ ಹೋಗುವ ಸ್ಥಳೀಯರು ಎಂದಿನಂತೆ ನಿಲ್ದಾಣದಲ್ಲಿ ನಿಂತಿದ್ದರು. ಆದರೆ ಭಾರಿ ಜನಸಂದಣಿಯಿಂದಾಗಿ ಜನರು ರೈಲು ಹತ್ತಲು ಸಾಧ್ಯವಾಗಲಿಲ್ಲ, ಇದು ಜಗಳಕ್ಕೆ ಕಾರಣವಾಯಿತು ಎನ್ನಲಾಗಿದೆ.

ಕೆಲವು ಪ್ರಯಾಣಿಕರು ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದರಿಂದ ಇತರರಿಗೆ ಹತ್ತಲು ತೊಂದರೆಯಾಯಿತು. ನಿಲ್ದಾಣದಲ್ಲಿ ಹತ್ತಲು ಬಂದವರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸಿಟ್ಟಿಗೆದ್ದ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದ್ದು, ಫುಟ್‌ಬೋರ್ಡ್ ಮೇಲೆ ನಿಂತಿದ್ದ ಇಬ್ಬರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರಯಾಣಿಕರು ರೈಲು ಹತ್ತಲು ಕಾಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಆದರೆ ಅವರಿಗೆ ಸಾಧ್ಯವಾಗದಿದ್ದಾಗ, ಭಾರಿ ಜಗಳ ನಡೆಯಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಇಬ್ಬರು ಪ್ರಯಾಣಿಕರಿಗೆ ಥಳಿಸಿ ಒದ್ದಿದ್ದಾರೆ. ಅದೇ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ತೆಗೆದಿರುವಂತೆ ತೋರುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read