ಪ್ರಯಾಣಿಕರಿಗೆ ಗುಡ್ ನ್ಯೂಸ್: ಓಣಂ ಪ್ರಯುಕ್ತ ‘ವಿಶೇಷ ರೈಲುಗಳ ಸಂಚಾರ’ ವಿಸ್ತರಣೆ

ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಎರ್ನಾಕುಲಂ -ಯಲಹಂಕ ಎರ್ನಾಕುಲಂ ಗರೀಬ್ ರಥ ಟ್ರೈ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲುಗಳ ಕಾರ್ಯಾಚರಣೆ ದಿನ ವಿಸ್ತರಿಸಲಾಗಿದೆ.

ಎರ್ನಾಕುಲಂ -ಯಲಹಂಕ ಟ್ರೈ ವೀಕ್ಲಿ ಸೂಪರ್ ಫಾಸ್ಟ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಸೆಪ್ಟೆಂಬರ್ 8 ರಿಂದ 18ರವರೆಗೆ ಭಾನುವಾರ, ಬುಧವಾರ, ಶುಕ್ರವಾರ ಐದು ಟ್ರಿಪ್ ಗಳಿಗೆ ವಿಸ್ತರಿಸಲಾಗಿದೆ. ಯಲಹಂಕ -ಎರ್ನಾಕುಲಂ ಟ್ರೈ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲ್ ಅನ್ನು ಸೆಪ್ಟೆಂಬರ್ 9 ರಿಂದ 19 ರವರೆಗೆ ಸೋಮವಾರ, ಗುರುವಾರ ಮತ್ತು ಶನಿವಾರ 5 ಟ್ರಿಪ್ ಗಳಿಗೆ ವಿಸ್ತರಿಸಲಾಗಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ -ಹೊಸಪೇಟೆ ನಿಲ್ದಾಣಗಳ ನಡುವೆ ಬಳ್ಳಾರಿ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆ ವಿಸ್ತರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read