ಸಾಕು ನಾಯಿಯೊಂದಿಗೆ ಸಂಸತ್ ಕಲಾಪಕ್ಕೆ ಬಂದ ಕಾಂಗ್ರೆಸ್ ಸಂಸದೆ: ಕಚ್ಚುವವರು ಸಂಸತ್ ನಲ್ಲಿಯೇ ಇದ್ದಾರೆ ಎಂದು ಬಿಜೆಪಿ ನಾಯಕರನ್ನು ಕುಟುಕಿದ ರೇಣುಕಾ ಚೌಧರಿ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಕಲಾಪ ಸಾಕ್ಷಿಯಾಯಿತು. ಈ ನಡುವೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ತಮ್ಮ ಸಾಕು ನಾಯಿಯೊಂದಿಗೆ ಸಂಸತ್ ಕಲಾಪಕ್ಕೆ ಆಗಮಿಸಿರುವ ಪ್ರಸಂಗ ನಡೆದಿದೆ.

ಸಂಸತ್ ಭವನಕ್ಕೆ ಸಂಸದೆ ರೇಣುಕಾ ಚೌಧರಿ ತಮ್ಮ ಸಾಕು ನಾಯಿಯೊಂದಿಗೆ ಆಗಮಿಸಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೆಳಿಗ್ಗೆ ಸಂಸತ್ ಭವನದ ವಿಸಿಟರ್ಸ್ ಗ್ಯಾಲರಿಗೆ ತಮ್ಮ ಕಾರಿನಲ್ಲಿ ಸಾಅಕು ನಾಯಿಯೊಂದಿಗೆ ಬಂದಿದದರೆ. ಇದಕ್ಕೆ ಬಿಜೆಪಿ ನಾಯಕರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೀಡಿದ ಸಂಸದರ ವಿಶೇಷ ಸವಲತ್ತುಗಳನ್ನು ರೇಣುಕಾಚೌಧರಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ನಾಯಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರೇಣುಕಾ ಚೌಧರಿ, ಸರ್ಕಾರ ಪ್ರಾಣಿಗಳನ್ನು ಒಳಗೆ ಇಡಲು ಇಷ್ಟಪಡಲ್ಲ. ಆದರೆ ಇದು ಚಿಕ್ಕ ಪ್ರಾಣಿ. ಯಾರನ್ನೂ ಕಚ್ಚುವುದಿಲ್ಲ. ಸಂಸತ್ತಿನಲ್ಲಿರುವವರಂತೆ ಇದು ಯಾರಿಗೂ ಕಚ್ಚಲ್ಲ, ಕಚ್ಚುವವರು ಒಳೆಗೆ ಕುಳಿತಿದ್ದಾರೆ ಎಂದು ಕುಟುಕಿದ್ದಾರೆ. ಸಾಕು ಪ್ರಾಣಿಗಳನ್ನು ಒಳಗೆ ತರಲು ಪಾಸ್ ಮಾಡಿ ಬಿಲ್ ಮಂಡಿಸಬೇಕು ಎಂದಿದ್ದಾರೆ. ಅಲ್ಲದೇ ನಾನು ನಾಯಿಯನ್ನು ಸ್ವಲ್ಪ ಸಮಯಕ್ಕೆ ಮಾತ್ರ ತಂದಿದ್ದೆ. ಬಳಿಕ ಅದನ್ನು ವಾಪಸ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read