ಒಲಿಂಪಿಕ್ಸ್ ಕ್ರೀಡಾ ಸ್ಥಳಕ್ಕೆ ಹತ್ಯೆಯಾದ ಒಲಿಂಪಿಕ್ ಓಟಗಾರ್ತಿ ರೆಬೆಕಾ ಚೆಪ್ಟೆಗೆ ಹೆಸರು: ಪ್ಯಾರಿಸ್ ಮೇಯರ್ ಘೋಷಣೆ

ಕೊಲೆಯಾದ ಉಗಾಂಡಾದ ಒಲಿಂಪಿಕ್ ಓಟಗಾರ್ತಿ ರೆಬೆಕಾ ಚೆಪ್ಟೆಗೆ ಅವರ ಹೆಸರನ್ನು ಕ್ರೀಡಾ ಸ್ಥಳಕ್ಕೆ ಹೆಸರಿಸುವ ಮೂಲಕ ಪ್ಯಾರಿಸ್ ನಗರವು ಗೌರವಿಸುತ್ತದೆ ಎಂದು ಫ್ರೆಂಚ್ ರಾಜಧಾನಿಯ ಮೇಯರ್ ಆನ್ನೆ ಹಿಡಾಲ್ಗೊ ಶುಕ್ರವಾರ ಘೋಷಿಸಿದ್ದಾರೆ.

ಕಳೆದ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದ್ದ ಚೆಪ್ಟೆಗೀ ಗುರುವಾರ ಕೀನ್ಯಾದ ತನ್ನ ಮನೆಯಲ್ಲಿದ್ದಾಗ ಗೆಳೆಯ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಂತರ ತೀವ್ರ ಸುಟ್ಟಗಾಯಗಳಿಂದ ಬಲಿಯಾಗಿದ್ದರು.

ಅವರು ಪ್ಯಾರಿಸ್ ನಲ್ಲಿ ನಮ್ಮನ್ನು ಬೆರಗುಗೊಳಿಸಿದರು. ಅವರ ಸೌಂದರ್ಯ, ಶಕ್ತಿ, ಸ್ವಾತಂತ್ರ್ಯ ಕೊಲೆ ಮಾಡಿದ ವ್ಯಕ್ತಿಗೆ ಅಸಹನೀಯವಾಗಿದೆ ಎಂದು ಹಿಡಾಲ್ಗೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ಯಾರಿಸ್ ರೆಬೆಕಾ ಅವರನ್ನು ಮರೆಯುವುದಿಲ್ಲ. ನಾವು ಆಕೆಗೆ ಕ್ರೀಡಾ ಸ್ಥಳವನ್ನು ಅರ್ಪಿಸುತ್ತೇವೆ, ಇದರಿಂದಾಗಿ ಅವರ ನೆನಪು ಮತ್ತು ಅವರ ಕಥೆ ನಮ್ಮ ನಡುವೆ ಉಳಿಯುತ್ತದೆ ಮತ್ತು ಸಮಾನತೆಯ ಸಂದೇಶವನ್ನು ಸಾಗಿಸಲು ಸಹಾಯ ಮಾಡುತ್ತದೆ, ಇದು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಂದ ಸಾರಲ್ಪಟ್ಟ ಸಂದೇಶವಾಗಿದೆ ಎಂದು ಹಿಡಾಲ್ಗೊ ತಿಳಿಸಿದ್ದಾರೆ.

33 ವರ್ಷದ ಚೆಪ್ಟೆಗೆಯ್ ಅವರು ಪ್ಯಾರಿಸ್ ಗೇಮ್ಸ್ ನಲ್ಲಿ ಮಹಿಳಾ ಮ್ಯಾರಥಾನ್‌ನಲ್ಲಿ ತಮ್ಮ ಒಲಿಂಪಿಕ್ ಚೊಚ್ಚಲ ಪ್ರವೇಶ ಮಾಡಿದರು, ಅಲ್ಲಿ ಅವರು 44 ನೇ ಸ್ಥಾನ ಪಡೆದರು.

ಆಕೆಯ ಕೀನ್ಯಾದ ಪಾಲುದಾರ ಡಿಕ್ಸನ್ ಎನ್ಡೀಮಾ ಮರಂಗಾಚ್ ಭಾನುವಾರ ತನ್ನ ಮಕ್ಕಳ ಮುಂದೆ ದಾಳಿ ಮಾಡಿ ಬೆಂಕಿ ಹಚ್ಚಿದ್ದು, ಶೇ. 80 ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ವಿಶ್ವಸಂಸ್ಥೆಯು ಇದನ್ನು “ಹಿಂಸಾತ್ಮಕ ಕೊಲೆ” ಎಂದು ಕರೆದಿದ್ದು, ಆಕೆಯ ಸಾವಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ, ನಮ್ಮ ಕ್ರೀಡೆಯು ಅತ್ಯಂತ ದುರಂತ ಮತ್ತು ಯೋಚಿಸಲಾಗದ ಸಂದರ್ಭಗಳಲ್ಲಿ ಪ್ರತಿಭಾವಂತ ಕ್ರೀಡಾಪಟುವನ್ನು ಕಳೆದುಕೊಂಡಿದೆ. ರೆಬೆಕ್ಕಾ ನಂಬಲಾಗದಷ್ಟು ಬಹುಮುಖ ಓಟಗಾರ್ತಿಯಾಗಿದ್ದರು. ರಸ್ತೆಗಳು, ಪರ್ವತಗಳು ಮತ್ತು ಕ್ರಾಸ್ ಕಂಟ್ರಿ ಟ್ರೇಲ್ ಗಳಲ್ಲಿ ಗಮನಸೆಳೆದಿದ್ದರು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read