‘ಆಪ್’ ಸಂಸದನ ಜೊತೆ ಇಂದು ಪರಿಣಿತಿ ಚೋಪ್ರಾ ಮದುವೆ; ಸಂಗೀತ ಸಮಾರಂಭದ ವಿಡಿಯೋ ವೈರಲ್

article-image

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಜೊತೆ ಇಂದು ಮದುವೆಯಾಗುತ್ತಿದ್ದು, ರಾಜಸ್ಥಾನದ ಉದಯಪುರದಲ್ಲಿ ಈ ಅದ್ದೂರಿ ಸಮಾರಂಭ ನಡೆಯುತ್ತಿದೆ. ಶನಿವಾರದಂದು ಆಗಮಿಸಿರುವ ಅತಿಥಿಗಳಿಗಾಗಿ ಸಂಗೀತ ಸಮಾರಂಭ ಏರ್ಪಡಿಸಲಾಗಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶುಕ್ರವಾರದಂದೇ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಮತ್ತವರ ಕುಟುಂಬಸ್ಥರು ವಿವಾಹ ಸಮಾರಂಭ ನಡೆಯಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ಗೆ ತಲುಪಿದ್ದು, ಶನಿವಾರದಂದು ಹಲವು ಪ್ರಮುಖ ಅತಿಥಿಗಳು ಉದಯಪುರ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಸಂಜೆ ಸಂಗೀತ ಸಮಾರಂಭ ಭರ್ಜರಿಯಾಗಿ ನಡೆದಿದೆ.

ಈ ಮದುವೆ ಸಮಾರಂಭದ ವಿಡಿಯೋ, ಫೋಟೋ ತೆಗೆದುಕೊಳ್ಳದಂತೆ ಅತಿಥಿಗಳಿಗೆ ಸೂಚಿಸಲಾಗಿದ್ದರೂ ಸಹ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪರಿಣಿತಿ ಚೋಪ್ರಾ ಅವರ ಮದುವೆ ಸಮಾರಂಭಕ್ಕೆ ಅವರ ಹತ್ತಿರದ ಸಂಬಂಧಿ ಪ್ರಿಯಾಂಕಾ ಚೋಪ್ರಾ ಸಹ ಆಗಮಿಸಲಿದ್ದಾರೆ, ಎನ್ನಲಾಗುತ್ತಿದ್ದು, ಆದರೆ ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

https://twitter.com/fpjindia/status/1705794603138556316?ref_src=twsrc%5Etfw%7Ctwcamp%5Etweetembed%7Ctwterm%5E1705794603138556316%7Ctwgr%5E753d7db33d8753c7a6bfe1bff6a5b9cb740fcfea%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fparineeti-chopra-raghav-chadha-wedding-inside-video-from-couples-desi-sangeet-goes-viral-watch

https://twitter.com/itkamleshjakhar/status/1705784579825824085?ref_src=twsrc%5Etfw%7Ctwcamp%5Etweetembed%7Ctwterm%5E1705784579825824085%7Ctwgr%5E753d7db33d8753c7a6bfe1bff6a5b9cb740fcfea%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fparineeti-chopra-raghav-chadha-wedding-inside-video-from-couples-desi-sangeet-goes-viral-watch

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read