ಒಡಿಶಾ : ಚಿಪ್ಸ್ ಪ್ಯಾಕೆಟ್ ನಲ್ಲಿದ್ದ ಆಟಿಕೆ ಗಂಟಲಲ್ಲಿ ಸಿಲುಕಿ 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ನಡೆದಿದೆ.
ಚಿಪ್ಸ್ ಪ್ಯಾಕೆಟ್ನಿಂದ ಚಿಕಣಿ ಆಟಿಕೆ ನುಂಗಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ದರಿಂಗ್ಬಾಡಿ ಬ್ಲಾಕ್ನ ಬ್ರಹ್ಮಣಿ ಪೊಲೀಸ್ ವ್ಯಾಪ್ತಿಯ ಮುಸುಮಹಾಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ರಂಜಿತ್ ಪ್ರಧಾನ್ ಅವರ ಮಗ ಬಿಗಿಲ್ ಪ್ರಧಾನ್ ಎಂದು ಗುರುತಿಸಲಾಗಿದೆ.
ಕುಟುಂಬದ ಸದಸ್ಯರು ಹೇಳುವಂತೆ ಹುಡುಗನ ತಂದೆ ಮಗನಿಗಾಗಿ ಚಿಪ್ಸ್ ಪ್ಯಾಕೆಟ್ ತಂದಿದ್ದರು. ಪ್ಯಾಕೆಟ್ ತೆರೆದ ನಂತರ, ಚಿಪ್ಸ್ ಜೊತೆಗೆ ಒಂದು ಸಣ್ಣ ಪ್ಲಾಸ್ಟಿಕ್ ಆಟಿಕೆ ಗನ್ ಪತ್ತೆಯಾಗಿದೆ.
ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಪೋಷಕರು ದೂರದಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಅದರೊಂದಿಗೆ ಆಟವಾಡುತ್ತಿದ್ದ. ಕೂಡಲೇ ಬಾಲಕ ಜೋರಾಗಿ ಕಿರುಚಿಕೊಂಡಿದ್ದಾನೆ. ಪೋಷಕರು ಬಂದು ನೋಡಿದಾಗ ಆಟಿಕೆಯನ್ನು ಬಾಲಕ ನುಂಗಿದ್ದನು. ಕೂಡಲೇ ಆಟಿಕೆಯನ್ನ ತೆಗೆಯಲು ಪ್ರಯತ್ನಿಸಿದರು ಆದರೆ ಆಗಲಿಲ್ಲ. ಬಾಲಕನನ್ನು ತಕ್ಷಣ ಗ್ರಾಮದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಡೇರಿಂಗ್ಬಾಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್ಸಿ) ಕರೆದೊಯ್ಯಲಾಯಿತು. ವೈದ್ಯರು ಬಾಲಕ ಬರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಚಿಪ್ಸ್ ಪ್ಯಾಕೆಟ್ನಲ್ಲಿದ್ದ ಆಟಿಕೆ ಮಗುವಿನ ಗಂಟಲ್ಲಿನಲ್ಲಿ ಸಿಲುಕಿ ಉಸಿರಾಡಲು ಆಗದೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕನ ಸಾವಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
